ಬೆಂಗಳೂರು:- ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದಿದ್ದ SSLC ಪರೀಕ್ಷೆಯ ಫಲಿತಾಂಶ ಪ್ರಕಟಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಕೆಲವೇ ಗಂಟೆಗಳಲ್ಲಿ ರಿಸಲ್ಟ್ ಅನೌನ್ಸ್ ಆಗಲಿದೆ.
Advertisement
ಇಂದು ಬೆಳಗ್ಗೆ 11:30 ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಪ್ರಕಟಿಸಲಿದ್ದಾರೆ. karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಇದೇ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ನಡೆದಿತ್ತು. ಮಾ.21ರಿಂದ ಏ.4 ರ ವರೆಗೆ ರಾಜ್ಯಾದ್ಯಂತ 2,818 ಕೇಂದ್ರಗಳಲ್ಲಿ 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಇಂದು ಪರೀಕ್ಷೆಯ ಫಲಿತಾಂಶ ಪ್ರಕಟ ಆಗಲಿದ್ದು, ರಿಸಲ್ಟ್ ಏನೇ ಇದ್ದರೂ ಮಕ್ಕಳು ಪಾಸಿಟಿವ್ ಆಗಿರಿ. ಏಕೆಂದರೆ ಅವಕಾಶಗಳು ನಿಮ್ಮ ಮುಂದೆ ಸಾಕಷ್ಟಿದೆ.. ಕುಗ್ಗದೆ ಮುನ್ನುಗ್ಗುತ್ತಿರಿ.