HomeBengaluru Newsಹೊಸವರ್ಷಕ್ಕೆ ದಿನಗಣನೆ: ಬೆಂಗಳೂರಿನಲ್ಲಿ ಪೋಲೀಸರು ಹೈ ಅಲರ್ಟ್, ಪಬ್, ಕ್ಲಬ್, ಹೋಟೆಲ್​ಗಳಿಗೆ ಮಾರ್ಗಸೂಚಿ ಬಿಡುಗಡೆ!

ಹೊಸವರ್ಷಕ್ಕೆ ದಿನಗಣನೆ: ಬೆಂಗಳೂರಿನಲ್ಲಿ ಪೋಲೀಸರು ಹೈ ಅಲರ್ಟ್, ಪಬ್, ಕ್ಲಬ್, ಹೋಟೆಲ್​ಗಳಿಗೆ ಮಾರ್ಗಸೂಚಿ ಬಿಡುಗಡೆ!

For Dai;y Updates Join Our whatsapp Group

Spread the love

ಬೆಂಗಳೂರು:- ಹೊಸವರ್ಷಕ್ಕೆ ಇನ್ನೇನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ನೂತನ ವರ್ಷ ಬರಮಾಡಿಕೊಳ್ಳಲು ಸಿಟಿ ಮಂದಿ ಸಜ್ಜಾಗಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಸಿದ್ಧತೆ ಶುರುವಾಗಿದೆ. ಈಗಾಗಲೇ ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರೀಗೇಡ್ ರೋಡ್​​ನಲ್ಲಿ 2026 ರ ಸ್ವಾಗತಕ್ಕೆ ಕೌಂಡ್​ಡೌನ್ ಶುರುವಾಗಿದ್ದು, ಪಬ್, ಬಾರ್ ಹಾಗೂ ಕ್ಲಬ್​ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಗೋವಾದ ನೈಟ್ ಕ್ಲಬ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 20 ಕ್ಕೂ ಹೆಚ್ಚು ಜನ ಮೃತಪಟ್ಟ ಘಟನೆಯ ನಂತರ ಇದೀಗ ಸುರಕ್ಷತೆಯ ದೃಷ್ಠಿಯಿಂದ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಂಗಳೂರಿನ ಪಬ್, ಬಾರ್, ಕ್ಲಬ್​ಗಳಿಗೆ ಕೆಲವು ಸಲಹೆಗಳನ್ನು ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿವೆ.

ಧ್ವನಿವರ್ಧಕದ ಸೌಂಡ್ ಎಷ್ಟಿರಬೇಕು? ಏನೆಲ್ಲ ಮುನ್ನೆಚ್ಚರಿಕೆ ಕ್ರಮ ತಗೆದುಕೊಳ್ಳಬೇಕು? ಎಲ್ಇಡಿ ಸ್ಕ್ರೀನ್ ಹಾಗೂ ಸುರಕ್ಷಿತಾ ಮಾನದಂಡಗಳ ಕುರಿತು ಸಲಹೆ ಸೂಚನೆ ನೀಡಲಾಗಿದೆ. ಜೊತೆಗೆ ಸರ್ಕಾರದಿಂದಲೂ ಪಬ್, ಬಾರ್, ಕ್ಲಬ್​ಗಳಿಗೆ ನೋಟಿಸ್ ನೀಡಲಾಗಿದೆ.

ಹೊಸ ವರ್ಷ ಸಂಭ್ರಮಾಚರಣೆಗೆ ಹೊಸ ರೂಲ್ಸ್ ಏನೇನು?

ಹೊಸ ವರ್ಷದ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ.

ಸಂಭ್ರಮಾಚರಣೆಗೆ ನಿಗದಿತ ಸಮಯ ಕಡ್ಡಾಯ ಫಾಲನೆ.

ಹೊಸ ವರ್ಷಕ್ಕೆ ಕಡ್ಡಾಯ ಧ್ವನಿರ್ವಕ ಪರವಾನಗಿ ಪಡೆಯಬೇಕು.

ಧ್ವನಿರ್ವಕಗಳ ತೀವ್ರತೆ ನೈಟ್ ಟೈಮ್ ಜನವಸತಿ ಪ್ರದೇಶಗಳಲ್ಲಿ 45DB ಇರಬೇಕು.

ಕಮರ್ಷಿಯಲ್ – 55DB ಹಾಗೂ ಇಂಡಸ್ಟ್ರೀಯಲ್ ಏರಿಯಾ ಮಿತಿ 70DB.

ಸ್ಥಳವಕಾಶಕ್ಕೆ ತಕ್ಕಂತೆ ಪಾಸ್ ಅಥವಾ ಟಿಕೇಟ್ ನೀಡಬೇಕು.

ನೆಲಮಹಡಿ, ಪಾರ್ಕಿಂಗ್ ಹಾಗೂ ಟೆರೆಸ್ ಗಳಲ್ಲಿ ಪಾರ್ಟಿ ಆಯೋಜನಗೆ ಬ್ರೇಕ್.

ಹೋಟೆಲ್, ಬಾರ್, ಪಬ್ ಹಾಗೂ ಕ್ಲಬ್​ಗಳ ಒಳಭಾಗಕ್ಕೆ ಮಾತ್ರ LED ಹಾಕಬೇಕು.

ಸಾರ್ವಜನಿಕರಿಗೆ ಕಾಣುವಂತೆ LED ಹಾಕುವಂತಿಲ್ಲ.

ಭದ್ರತೆ ದೃಷ್ಟಿಯಿಂದ ಗ್ರಾಹಕರ ಸ್ಕ್ರಿನಿಂಗ್ ತಪಾಸಣೆ ಮಾಡಬೇಕು.

ಕಾರ್ಯಕ್ರಮದಲ್ಲಿ ಅಗ್ನಿ ನಿರೋಧಕ ಬಳಕೆ ಇರಬೇಕು.

ಕಾಲ್ತುಳಿತ ಪ್ರಕರಣ ಆಗದಂತೆ ನೋಡಿಕೊಳ್ಳಬೇಕು.

ತುರ್ತು ನಿಗಮಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು.

ಹೋಟೆಲ್ ಪ್ರವೇಶ, ನಿರ್ಗಮನ, ಪಾರ್ಕಿಂಗ್ ಸುತ್ತಮುತ್ತಲಿನ ಸಿಸಿ ಕ್ಯಾಮರಾ ಅಳವಡಿಸಬೇಕು.

ಹೋಟೆಲ್, ಬಾರ್, ಪಬ್ ಹಾಗೂ ಕ್ಲಬ್​ಗಳಲ್ಲಿ ಮಾದಕ ದ್ರವ್ಯ ಮಾರಟ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು.

ಕಾರ್ಯಕ್ರಮದ ಸ್ಥಳದಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದು.

NO SMOKING/ NO DRUGS ಫಲಕಗಳನ್ನ ಅಳವಡಿಸಬೇಕು.

ಹೊಸ ವರ್ಷಕ್ಕೆ ಆಗಮಿಸುವ ಸೆಲೆಬ್ರಿಟೀಸ್, ಅತಿಥಿ ಕಲಾವಿದರ ಮಾಹಿತಿ ಮೊದಲೇ ಪೊಲೀಸ್ ಇಲಾಖೆಗೆ ತಿಳಿಸಬೇಕು.

ಇನ್ನು ಮಹಿಳೆಯರ ರಕ್ಷಣೆ ಹಾಗೂ ಅಹಿತಕರ ಘಟನೆ ನಿಯಂತ್ರಣಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ದಿನ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ ಸೇರಿದಂತೆ ಮೂರು ರಸ್ತೆಗಳ ಬೇಸ್ಮೆಂಟ್ ಶಾಪ್ ಗಳ ನೆಲಮಹಡಿಯ ಅಂಗಡಿಗಳು ಹಾಗೂ ಅಂಡರ್ ಪಾಸ್​​ಗಳನ್ನು ಬಂದ್ ಮಾಡುವಂತೆ ಬ್ರಿಗೇಡ್ ರೋಡ್ ಸಂಘಟನೆ ಹೇಳಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!