ಚಿತ್ರದುರ್ಗ: ಕೆರೆಯಲ್ಲಿ ಮುಳುಗಿ ದಂಪತಿ ದುರ್ಮರಣ ಹೊಂದಿರುವ ಘಟನೆ ಹೊಸದುರ್ಗ ತಾಲೂಕಿನ ಅತ್ತಿಮಗೆ ಗ್ರಾಮದಲ್ಲಿ ಜರುಗಿದೆ. ಕುರಿಗಳ ಮೈ ತೊಳೆಯಲು ಹಳ್ಳಕ್ಕೆ ಹೋಗಿದ್ದ ವೇಳೆ ದುರಂತ ಸಂಭವಿಸಿದೆ.
ಅತ್ತಿಮಗೆ ಗ್ರಾಮದ ನಿವಾಸಿಗಳಾದ ಪತಿ ಕುತರಿಗಾಯಿ ತಿಮ್ಮೇಶ, ಪತ್ನಿ ಪುಟ್ಟಮ್ಮ ಮೃತ ದಂಪತಿಗಳು. ಕುರಿಗಳ ಮೈ ತೊಳೆಯಲು ಗ್ರಾಮದ ಹೊರವಲಯದ ಕಾನಿ ಹಳ್ಳಕ್ಕೆ ಕುರಿಗಳನ್ನು ಹೊಡೆದುಕೊಂಡು ದಂಪತಿ ಹೋಗಿದ್ರು. ಈ ವೇಳೆ ಆಕಸ್ಮಿಕವಾಗಿ ಹಳ್ಳಕ್ಕೆ ಜಾರಿ ಬಿದ್ದ ದಂಪತಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆಯಿಂದ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹೊಸದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.



