ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಜೋಡಿಗಳ ರೋಮ್ಯಾನ್ಸ್ , ಕಿಸ್ಸಿಂಗ್ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಮೆಟ್ರೋದಲ್ಲಿ ಜೋಡಿಯ ರೋಮ್ಯಾನ್ಸ್ ಸೇರಿದಂತೆ ಹಲವು ಘಟನೆಗಳು ಈಗಾಗಲೇ ವರದಿಯಾಗಿದೆ. ಇದೀಗ ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಜೋಡಿಯೊಂದು ಅಸಭ್ಯವಾಗಿ ವರ್ತಿಸಿದೆ ಎನ್ನಲಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೌದು ಬೆಂಗಳೂರಿನ ಮೆಜೆಸ್ಟಿಕ್ ನಮ್ಮ ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್ 3 ರಲ್ಲಿ ಯುವ ಜೋಡಿಯೊಂದು ಅಕ್ಕಪಕ್ಕ ಮಹಿಳೆಯರು, ಹಿರಿಯರಿದ್ದರೂ ಕ್ಯಾರೇ ಎನ್ನದೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ.
ಕರ್ನಾಟಕ ಪೋರ್ಟ್ಫೋಲಿಯೋ’ ಎಂಬ ಎಕ್ಸ್ ಹ್ಯಾಂಡಲ್ನಲ್ಲಿ, ‘‘ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋ ಸಂಸ್ಕೃತಿಯತ್ತ ಸಾಗುತ್ತಿದೆಯೇ?’’ ಎಂದು ಪ್ರಶ್ನಿಸಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋಗೆ ಈಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಜೋಡಿಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.