ವಿಜಯನಗರ: ಕಳೆದೊಂದು ವಾರದಿಂದ ಮಳೆರಾಯನ ಅಬ್ಬರ ಜೋರಾಗ್ತಿದೆ. ಮಳೆರಾಯನ ರುದ್ರ ನರ್ತನಕ್ಕೆ ಕೋರ್ಟ್ ಆವರಣ ಜಲಾವೃತಗೊಂಡಿದೆ. ಹೌದು ವಿಜಯನಗರ ಜಿಲ್ಲಾದ್ಯಾಂತ ಭಾರೀ ಮಳೆಯಿಂದ ಹಳ್ಳಕೊಳ್ಳಗಳು ಭರ್ತಿಯಾಗಿದೆ. ತಡರಾತ್ರಿ ಸುರಿದ ಭಾರೀ ಮಳೆಗೆ 3 ಮನೆಗಳು ಕುಸಿದಿವೆ.
Advertisement
ಕೋರ್ಟ್ ಆವರಣಕ್ಕೆ ನುಗ್ಗಿದ ನೀರಿನಿಂದ ಸಾರ್ವಜನಿಕರ ಪರದಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋರ್ಟ್ ಆವರಣದ ನೀರು ತೆಗೆಯುವುದಕ್ಕೆ ಪೌರ ಕಾರ್ಮಿಕರು ಹರಸಾಹಸ ಪಟ್ಟಿದ್ದು, ಹಡಗಲಿ ತಾಲೂಕಿನದ್ಯಾಂತ 22 ಮನೆಗಳಿಗೆ ಹಾನಿಯಾಗಿದೆ. ಭಾರೀ ಮಳೆಗೆ ರೈತರ ಧಾನ್ಯಗಳು ನೀರುಪಾಲಾಗಿದ್ದು, ವಿಜಯನಗರ ಜಿಲ್ಲೆಯ ಹಡಗಲಿ ಪಟ್ಟಣದಲ್ಲಿ ಘಟನೆ ನಡೆದಿದೆ.