ಬೆಂಗಳೂರು: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಅಂತ ಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಅತ್ಯಾಚಾರ ಸೇರಿದಂತೆ 4 ಪ್ರಕರಣಗಳಲ್ಲಿ ಜೈಲು ಸೇರಿರುವ ಮಾಜಿ ಸಂಸದನಿಗೆ ಆತಂಕ ಎದುರಾಗಿದೆ. ಕೆಆರ್ ಪೇಟೆ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಅಂತ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಶಿಕ್ಷೆ ಏನು ಎನ್ನುವುದು ಇಂದು ಕೋರ್ಟ್ ಪ್ರಕಟಿಸಲಿದೆ.
ಬಿಎನ್ಎಸ್ 376(2) (k), 376 (2) (n), 354 (a) (b) (c), 506 ಮತ್ತು 201, IT ACT 66(E) ಅಡಿಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 376(2) (k) ಮತ್ತು 376 (2) (n) ಕನಿಷ್ಟ 10 ವರ್ಷ, ಗರಿಷ್ಠ ಜೀವಿತಾವಧಿ ವರೆಗೂ ಶಿಕ್ಷೆ ವಿಧಿಸುವ ವಿವೇಚನಾಧಿಕಾರವನ್ನು ಕೋರ್ಟ್ ಹೊಂದಿದೆ.
ಅದೇ ರೀತಿ 354 (a) (b) (c) ಅಡಿಯಲ್ಲಿ 3 ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೇ ಸೆಕ್ಷನ್ 506 ಅಡಿಯಲ್ಲಿ 6 ತಿಂಗಳು, 201 ಬಿಎನ್ಎಸ್ ಅಡಿಯಲ್ಲಿ ಕನಿಷ್ಠ 1 ವರ್ಷದಿಂದ 7 ವರ್ಷ ಶಿಕ್ಷೆ ನೀಡಬಹುದು. ಹಾಗೆಯೇ ಸೆಕ್ಷನ್ 66(E) of ಐಟಿ ಆ್ಯಕ್ಟ್ 2008 ಅಡಿಯಲ್ಲಿ 3 ವರ್ಷ ಶಿಕ್ಷೆ ವಿಧಿಸುವ ಅವಕಾಶಗಳಿವೆ.