ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇಲ್ಲಿನ ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಯಲ್ಲವ್ವ ಕವಲೂರ, ಉಪಾಧ್ಯಕ್ಷರಾಗಿ ಅನಸೂಯಾ ಸೋಮಗಿರಿ ಹಾಗೂ ಪ.ಪಂ ಆಶ್ರಯ ಕಮಿಟಿಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಬಿ.ವ್ಹಿ. ಸುಂಕಾಪೂರ, ಫಕೀರಯ್ಯ ಅಮೋಘೀಮಠ ಹಾಗೂ ಮುಮತಾಜ್ ಸೈಯದಲಿ ಶೇಖ ಅವರಿಗೆ ಸ್ಥಳೀಯ ಖಿದ್ಮತ್-ಎ-ಮಿಲ್ಲತ್ ಗ್ರೂಪ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
Advertisement
ಈ ಸಂದರ್ಭದಲ್ಲಿ ಗ್ರೂಪ್‌ನ ಅಧ್ಯಕ್ಷರಾದ ರಾಜೇಸಾಬ ಸೈಯದಬಡೆ, ಅಂಜುಮನ ಸಂಸ್ಥೆ ಅಧ್ಯಕ್ಷರಾದ ತಾಜುದ್ದೀನ ಕಿಂಡ್ರಿ, ಚಾಂದ ಮುಬಾರಕ, ಕಮಿಟಿ ಅಧ್ಯಕ್ಷ ಎಂ.ಎ. ಖಾಜಿ, ಉಪಾಧ್ಯಕ್ಷ ಅಬ್ದುಲಹಮೀದ ಮುಜಾವರ, ಕಾರ್ಯದರ್ಶಿ ಹೈದರ ಖವಾಸ, ಖಜಾಂಚಿ ಮುನ್ನಾ ಢಾಲಾಯತ, ಮಹ್ಮದರಪೀಕ ದಲೀಲ, ದಾವಲಸಾಬ ಲಕ್ಷೆö್ಮÃಶ್ವರ ಹಾಗೂ ಗ್ರೂಪ್ ಸದಸ್ಯರಾದ ದಾವೂದ ಜಮಾಲ, ಖಲಂದರ ಗಾಡಿ, ನಜೀರ ಢಾಲಾಯತ ಹಿರಿಯರಾದ ಮಲ್ಲಪ್ಪ ಕುಂದಗೋಳ, ವರ್ಷಾ ಬಾರಕೇರ ಇತರರು ಹಾಜರಿದ್ದರು.