ಹಾಸನ: ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಹೌದು ಹಾಸನದ ಹೊರವಲಯದ ಬುಸ್ತೇನಹಳ್ಳಿ ಗ್ರಾಮದಲ್ಲಿ ಹಸು ಅವಳಿ ಕರುವಿಗೆ ಜನ್ಮ ನೀಡಿದ್ದನ್ನು ಕಂಡು ಸ್ಥಳೀಯರು ಬೆರಗಾಗಿದ್ದಾರೆ.
Advertisement
ಬುಸ್ತೇನಹಳ್ಳಿ ಗ್ರಾಮದ ಶಾರದ ವೆಂಕಟೇಶ್ ಅವರು ಸಾಕಿರುವ ಪ್ರೀತಿಯ ಹಸು ಅವಳಿ ಕರುಗಳಿಗೆ ಜನ್ಮ ನೀಡಿದೆ. ಅವಳಿ ಕರು ಕಂಡು ಹಸು ಮಾಲೀಕರ ಮನೆಯಲ್ಲಿ ಸಂಭ್ರಮ ಹೆಚ್ಚಾಗಿದೆ.
ಆರೋಗ್ಯವಾಗಿರುವ ಎರಡೂ ಕರುಗಳನ್ನು ಆರೈಕೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಹಸುಗಳು ಒಂದೇ ಕರುವಿಗೆ ಜನ್ಮ ನೀಡುತ್ತವೆ. ಆದರೆ ಹಾಸನದ ಬುಸ್ತೇನಹಳ್ಳಿ ಗ್ರಾಮದಲ್ಲಿ ಅಪರೂಪಕ್ಕೆ ಎಂಬಂತೆ ಎರಡು ಕರುಗಳಿಗೆ ಹಸು ಜನ್ಮ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.