HomeGadag NewsGadaga: ಚಿರತೆ ದಾಳಿಗೆ ಹಸು, ಆಡು ಬಲಿ: ಗ್ರಾಮಸ್ಥರಲ್ಲಿ ಆತಂಕ!

Gadaga: ಚಿರತೆ ದಾಳಿಗೆ ಹಸು, ಆಡು ಬಲಿ: ಗ್ರಾಮಸ್ಥರಲ್ಲಿ ಆತಂಕ!

For Dai;y Updates Join Our whatsapp Group

Spread the love

ಗದಗ:- ಚಿರತೆ ದಾಳಿಗೆ ಹಸು, ಆಡು ಬಲಿ ಆಗಿದ್ದು, ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಅಂಬರಕೊಳ್ಳದಲ್ಲಿ ಜರುಗಿದೆ.

ಈ ಆಡು, ಹಸು ಇದೇ ಗ್ರಾಮದ ತಾವರೆಪ್ಪ ಮಾಳೋತ್ತರ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತೋಟದ ಮನೆಯಲ್ಲಿ ಕಟ್ಟಿದ್ದ ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆದಿದೆ.

ಚಿರತೆ ದಾಳಿ ನಡೆದ ಕೂಗಳತೆ ದೂರದಲ್ಲಿ ರಾಣಿ ಚೆನ್ನಮ್ಮ ವಸತಿ ಶಾಲೆ ಇದ್ದು, ಮಕ್ಕಳ ಪೋಷಕರಲ್ಲೂ ಹೆಚ್ಚು ಆತಂಕ ಮನೆ ಮಾಡಿದೆ. ಕೂಡಲೇ ಅರಣ್ಯ ಇಲಾಖೆ ಇತ್ತ ಗಮನಹರಿಸಿ ಬೋನ್ ಅಳವಡಿಸುವ ಮೂಲಕ ಚಿರತೆ ಸೆರೆಹಿಡಿಯುವಂತೆ ಜಿಲ್ಲಾಡಳಿತ, ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!