ಚಿಕ್ಕಮಗಳೂರು: ರಸ್ತೆ ಬದಿಯಲ್ಲಿ ಮಲಗಿದ್ದ ಗೋವುಗಳನ್ನು ಎಕ್ಸ್ ಯುವಿ 500 ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ಹಿಂದೂ ಕಳ್ಳರನ್ನು ಸಂಘಟನೆಯ ಕಾರ್ಯಕರ್ತರು ಸಿನಿಮಾ ರೀತಿಯಲ್ಲಿ ಚೇಸ್ ಮಾಡಿದ ಘಟನೆ ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಪ್ಪದಿಂದ ಕುದುರೆಗುಂಡಿ ಸುಮಾರು 10 ಕಿಲೋಮೀಟರ್ ದೂರ ಎರಡು ಕಾರುಗಳು ಅತೀವೇಗದಲ್ಲಿ ರೇಸ್‌ನಂತೆ ಸಾಗಿವೆ. ಹಿಂದೂ ಸಂಘಟನೆಯ ಮೊಬೈಲ್ ಕಾರ್ಯಕರ್ತರು ಈ ಚೇಸ್ ದೃಶ್ಯವನ್ನು ದಾಖಲಿಸಿದ್ದಾರೆ. ಕೊಪ್ಪ ಪಟ್ಟಣದಿಂದ ಕುದುರೆಗುಂಡಿವರೆಗೂ ಹಿಂಬಾಲಿಸಿದರೂ, ಗೋ ಕಳ್ಳರ ಕಾರು ಅತೀವೇಗದಲ್ಲಿ ಸಾಗಿದ ಕಾರಣ ಹಿಡಿಯಲು ಸಾಧ್ಯವಾಗಿಲ್ಲ. ಬಳಿಕ ಕಾರ್ಯಕರ್ತರು ವಾಪಸ್ ಆಗಿದ್ದಾರೆ.
ಗೋವುಗಳನ್ನು ಸಾಗಿಸುತ್ತಿದ್ದ ಕಾರು ತೀರ್ಥಹಳ್ಳಿ ಮಾರ್ಗವಾಗಿ ಪರಾರಿಯಾಗಬಹುದೆಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಶಂಕೆ ವ್ಯಕ್ತಪಡಿಸಿವೆ.
ಕೊಪ್ಪ ಪಟ್ಟಣದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿಂದೂ ಸಂಘಟನೆಗಳು ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದು, ಆರೋಪಿಗಳನ್ನು ಬಂಧಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಬೇಡಿಕೆ ಇದ್ದರೆ ಠಾಣೆ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.



