ಶಿರಹಟ್ಟಿ ತಾಲೂಕಿನಲ್ಲಿ ಗೋವುಗಳ ಮಾರಣಹೋಮ: ಶ್ರೀರಾಮ ಸೇನೆ ಆರೋಪ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ತಾಲೂಕಿನಲ್ಲಿ ಪ್ರತಿನಿತ್ಯ ನೂರಾರು ಗೋವುಗಳು ಆಕ್ರಮವಾಗಿ ಕಗ್ಗೊಲೆಯಾಗಿ ಜೀವ ಕಳೆದುಕೊಳ್ಳುತ್ತಿದ್ದರೂ ಸಹ ತಾಲೂಕಾಡಳಿತ, ಪೊಲೀಸ್ ಇಲಾಖೆ ಜಾಣ ಕುರುಡು ನೀತಿ ಅನುಸರಿಸುತ್ತಿದೆಯೆಂದು ಶ್ರೀರಾಮ ಸೇನೆ ರಾಜ್ಯ ಶಾರೀರಿಕ ಪ್ರಮುಖ ಮಹೇಶ ರೋಖಡೆ ಆರೋಪಿಸಿದರು.

Advertisement

ಶಿರಹಟ್ಟಿ ತಹಸೀಲ್ದಾರ ಕಚೇರಿಯೆದುರು ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ದೌರ್ಜನ್ಯ ವಿರೋಧಿಸಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿರಹಟ್ಟಿಯಲ್ಲಿ ಯಾವದೇ ಕಸಾಯಿಖಾನೆಗಳಿಲ್ಲ. ಪ್ರತಿನಿತ್ಯ ವಿವಿಧ ಮಸೀದಿಗಳಲ್ಲಿ ಗೋವುಗಳನ್ನು ಆಕ್ರಮವಾಗಿ ಕಗ್ಗೊಲೆ ಮಾಡಿ ಸೇವಿಸಲಾಗುತ್ತಿದೆ. ಈ ಸಂಗತಿ ಶಿರಹಟ್ಟಿ ತಾಲೂಕಾಡಳಿತ, ಪೊಲೀಸ್ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಇದುವರೆಗೆ ಒಂದೇ ಒಂದು ಪ್ರಕರಣ ದಾಖಲಿಸಲಾಗಿಲ್ಲವೆಂದು ಆರೋಪಿಸಿದರು.

ಇಂತಹ ಒಂದು ನಿರ್ದಿಷ್ಟ ವರ್ಗದ ಜನತೆಗೆ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಪರೋಕ್ಷವಾಗಿ, ಅಪರೋಕ್ಷವಾಗಿ ಸಹಾಯ-ಸಹಕಾರ ನೀಡುತ್ತಿದ್ದಾರೆ. ಇದರಿಂದಾಗಿ ಮಸೀದಿಗಳಲ್ಲಿ ಗೋವುಗಳ ವಧೆ ಯಥಾವತ್ತಾಗಿ ನಡೆದಿದೆ. ಸರಕಾರಿ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳಂತೆ ಒಂದು ನಿರ್ದಿಷ್ಟ ವರ್ಗವನ್ನು ಓಲೈಸುತ್ತಿರುವದು ವಿಚಿತ್ರವಾಗಿದೆ. ಯಾರ ಅಣತಿಯಂತೆ ಪಿಎಸ್‌ಐ ಈರಣ್ಣ ರಿತ್ತಿ ಗೋವುಗಳ ಹತ್ಯೆ ನಡೆಯುತ್ತಿದ್ದರೂ ಮೌನವಾಗಿದ್ದಾರೆಂಬ ಸಂಗತಿಯ ಬಗ್ಗೆ ಜಿಲ್ಲಾ ಪೊಲೀಸ್ ವಿಶೇಷಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸೋಮಪ್ಪ ಲಮಾಣಿ, ಗಂಗವ್ವ ಲಮಾಣಿ, ಬಸವರಾಜ ಕುರ್ತಕೋಟಿ, ಸತೀಶ ಕುಂಬಾರ, ಮಹೇಶ ಹೆಬಸೂರ, ಶಿವಯೋಗಿ ಹಿರೇಮಠ, ಕಿರಣ ಹಿರೇಮಠ, ವೆಂಕಟೇಶ ದೊಡ್ಡಮನಿ, ಅಭಿಲಾಷ ಗುಜಮಾಗಡಿ, ಲಕ್ಷ್ಮಣ ಗೌಡ, ರಮೇಶ ವಾಲ್ಮೀಕಿ, ಈರಪ್ಪ ವಾಲ್ಮೀಕಿ, ಪ್ರಮೋದ ರಜಪೂತ, ಕುಮಾರ ಮಿಟ್ಟಿಮಠ, ಹುಲಿಗೆಪ್ಪ ವಾಲ್ಮೀಕಿ, ಈರಣ್ಣ ಗಾಣಿಗೇರ, ಪರಶುರಾಮ ಆಡಿನ, ಮಂಜುನಾಥ ಸಜ್ಜನ, ಆನಂದ ಅರಿಕೇರಿ, ಬಸವರಾಜ ವೆಂಕಟಾಪೂರ, ಮೈಲಾರಿ ದಂಡಿನ, ಪರಶುರಾಮ ಡೊಂಕನಹಳ್ಳಿ, ರಮೇಶ ಲಮಾಣಿ ಮುಂತಾದವರಿದ್ದರು.

 


Spread the love

LEAVE A REPLY

Please enter your comment!
Please enter your name here