ನೆಲಮಂಗಲ : ಹಾಡ ಹಗಲಿನಲ್ಲಿಯೇ ಹಸು ಕದ್ದು ಖದೀಮರು ಎಸ್ಕೇಪ್ ಆಗಿರುವ ಘಟನೆ ನೆಲಮಂಗಲ ತಾಲೂಕು ಬೈರಸಂದ್ರ ಗ್ರಾಮದಲ್ಲಿ ಜರುಗಿದೆ.
ಇದೇ ಗ್ರಾಮದ ರೈತ ಗೋವರ್ಧನ್ ಅವರ ಹಸು ಇದಾಗಿದ್ದು, ತೋಟದಲ್ಲಿ ಹಸು ಮೇಯಲು ಕಟ್ಟಿದ್ದ ವೇಳೆ 60 ಸಾವಿರ ಬೆಲೆ ಬಾಳುವ ಹಸು ಕಳ್ಳತನವಾಗಿದೆ.
ಓಪನ್ ಟಾಟಾ ಎಸಿಯಲ್ಲಿ ಖದೀಮರು ಹಸು ಸಾಗಿಸಿದ್ದಾರೆ. ಹಸು ಸಾಗಿಸಿತ್ತಿರುವ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹಸು ಕಳ್ಳತನದಿಂದ ರೈತ ಕಂಗಾಲಾಗಿದ್ದು, ಪದೇ ಪದೇ ತಾಲೂಕಿನಲ್ಲಿ ಹಸು ಕಳ್ಳತನ ಪ್ರಕರಣ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗುತ್ತಿದ್ದರೂ ಪೊಲೀಸರು ಕ್ಯಾರೇ ಎನ್ನುತ್ತಿಲ್ಲ.



