ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ನೂರು ಹಸು ಕೊಡಿಸಿದ್ರು ಪಾಪ ಪರಿಹಾರ ಆಗಲ್ಲ – ಛಲವಾದಿ ನಾರಾಯಣಸ್ವಾಮಿ

0
Spread the love

ಬೆಂಗಳೂರು: ಚಾಮರಾಜಪೇಟೆಯ ವಿನಾಯಕನಗರದಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿ ಕ್ರೌರ್ಯ ಮೆರೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಹಸುಗಳ ಮಾಲೀಕರಾದ ಕರ್ಣ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,

Advertisement

ಹಸುಗಳಿಗೆ ಚಿಕಿತ್ಸೆ ನೀಡಲಾಗಿದೆ. ಇನ್ನೂ ಈ ವಿಚಾರವಾಗಿ ನೂರು ಹಸು ಕೊಡಿಸಿದ್ರು ಪಾಪ ಪರಿಹಾರ ಆಗಲ್ಲ  ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇದು ಮಾನವರು ತಲೆ ತಗ್ಗಿಸುವ ಕೆಲಸ. ಹಸುಗಳಿಗೆ ಕೆಚ್ಚಲು ಕುಯ್ಯೋ ಅಮಾನವೀಯ ಕೆಲಸ ಮಾನವರು ಮಾಡಲು ಸಾಧ್ಯವಿಲ್ಲ.

ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಕೆಚ್ಚಲು ಕೊಯ್ಯಬಹುದು. ಮೂಕ ಪ್ರಾಣಿಗಳ ಕೆಚ್ಚಲು ಯಾರು ಕೊಯ್ದರು ಎಂದು ಬಯಲಿಗೆ ತರಬೇಕು. ಆದರೆ ಈ ಕೇಸ್ ಮುಚ್ಚಿ ಹಾಕೋ ಪ್ರಯತ್ನ ಆಗ್ತಿದೆ. ಸಿಎಂ ರಾಜಕೀಯ ಮಾಡಬೇಡಿ, ಶಾಸಕರು ನಾನು 3 ಹಸು ಕೊಡಿಸ್ತೀನಿ ಎಂದಿದ್ದಾರೆ. ನೂರು ಹಸು ಕೊಡಿಸಿದ್ರು ಪಾಪ ಪರಿಹಾರ ಆಗಲ್ಲ ಎಂದು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here