ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಗೋಪಾಷ್ಟಮಿ ಕಾರ್ಯಕ್ರಮವನ್ನು ಗದುಗಿನ ಸೋಮೇಶ್ವರ ದೇವಸ್ಥಾನದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ಗೋಗ್ರಾಸ ನೀಡುವ ಮೂಲಕ ಆಚರಿಸಲಾಯಿತು.
ಮುಖ್ಯ ವಕ್ತಾರರಾಗಿ ಆಗಮಿಸಿದ್ದ ರವಿ ಹಡಪನವರ ಮಾತನಾಡಿ, ಗೋಮಾತೆ ಅನಾದಿಕಾಲದಿಂದಲೂ ರಾಜ–ಮಹಾರಾಜ ಹಾಗೂ ಜನಸಾಮಾನ್ಯರ ಆರೋಗ್ಯ, ಐಶ್ವರ್ಯದ ಖಜಾನೆ ಆಗಿತ್ತು. ಮುಕ್ಕೋಟಿ ದೇವತೆಗಳ ವಾಸಸ್ಥಾನವಾಗಿದ್ದ ಗೋಮಾತೆ ನಡೆದಾಡುವ ಪುಣ್ಯಕ್ಷೇತ್ರದ ಸಂಕೇತ. ಮನುಕುಲದ ಕೊಂಡಿಯಾಗಿದ್ದ ಗೋಮಾತೆ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿ ಗೋವುಗಳ ಸಂಖ್ಯೆ ಇಳಿಮುಖವಾಗಿದೆ. ರೈತರ ಜೀವನಾಡಿಯಾಗಿದ್ದ ಎತ್ತುಗಳ ಜಾಗದಲ್ಲಿ ಆಧುನಿಕ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಆಧುನಿಕ ಜಗತ್ತಿನತ್ತ ಹೋಗುತ್ತಿರುವ ಮಾನವನಿಗೆ ಆರೋಗ್ಯ, ಆಯುಷ್ಯ ಕನಸಾಗುತ್ತಿದೆ. ಕೇವಲ ಪೂಜಿಸುವುದರಿಂದ ಗೋರಕ್ಷಣೆ ಸಾಧ್ಯವಿಲ್ಲ. ಅವುಗಳನ್ನು ಪ್ರಾಮಾಣಿಕವಾಗಿ ರಕ್ಷಿಸಿ, ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಅತಿಥಿಗಳಾಗಿ ಹಿರಿಯರಾದ ಬಸವರಾಜ ರಾಮನಕೊಪ್ಪ, ಮಾಣಿಕಸಾ ಮೇರವಾಡ ಆಗಮಿಸಿದ್ದರು. ಪ್ರಾರಂಭದಲ್ಲಿ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ಪ್ರಾರ್ಥನೆ ಜರುಗಿತು. ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ ಗೋಪೂಜೆಯ ಮಹತ್ವ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೃಶಕ್ತಿ ಜಿಲ್ಲಾಧ್ಯಕ್ಷೆ ರತ್ನ ಹೇಮಾದ್ರಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವೀರಣ್ಣ ಹೇಮಾದ್ರಿ, ವೀರಣ್ಣ ಕಾಮತ್ನವರ, ಸತ್ಯನಾರಾಯಣ ವಡವಡಗಿ, ಮಾರುತಿ ಸುರೇಬಾನ, ಸೋಮು ಮುಳಗುಂದ, ಪ್ರದೀಪ ಹಿರೇಮಠ, ಸ್ವರೂಪ ಹುಬ್ಬಳ್ಳಿ, ವೀರೇಶ ಮಡಿವಾಳರ, ಧನುಷ್ ಹೇಮಾದ್ರಿ, ಕೃಷ್ಣ ಬೆನಹಾಳ, ಮೃತ್ಯುಂಜಯ, ಪ್ರಶಾಂತ, ಆಕಾಶ ಕುಂಬಾರ, ಪವನ, ರಾಘವೇಂದ್ರ, ಕಾರ್ತಿಕ ಕಾಶಪ್ಪನವರ, ಸರೋಜಾ, ಲಕ್ಷ್ಮಿಬಾಯಿ ಹುಬ್ಬಳ್ಳಿ, ಗೀತಾ ಚವಡಿ, ರತ್ನಾ ಬಾಣಿ, ಕೀರ್ತಿ ಪುಣೇಕರ್, ಸರಸ್ವತಿ ಮೇರವಾಡೆ, ಅಂಬು ಮೇರವಾಡೆ, ಮಂಗಳಾ, ಶಿಲ್ಪಾ ಬೀರಗೊಣ್ಣವರ, ರಾಜೇಶ್ವರಿ ಅರಸಿದ್ಧಿ ಭಾಗವಹಿಸಿದ್ದರು.
ನಗರ ಅಧ್ಯಕ್ಷರಾದ ಶ್ರೀನಿವಾಸ್ ಹುಬ್ಬಳ್ಳಿ ಸ್ವಾಗತಿಸಿದರು. ಗ್ರಾಮೀಣ ಅಧ್ಯಕ್ಷ ಕಲ್ಮೇಶ್ವರಯ್ಯ ಹಿರೇಮಠ ವಂದಿಸಿದರು.



