ಗೋಕುಲಾಷ್ಟಮಿ ನಿಮಿತ್ತ ತೊಟ್ಟಿಲೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಗೋಕುಲಾಷ್ಟಮಿ ನಿಮಿತ್ತ ತೊಟ್ಟಿಲ ಕಾರ್ಯಕ್ರಮ ಜರುಗಿತು. 

Advertisement

ಶ್ರೀ ಹಿಂಗುಲಾಂಬಿಕಾ ಮಹಿಳಾ ಮಂಡಳಿಯ ಮಹಿಳೆಯರು, ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶುಕ್ರವಾರ ರಾತ್ರಿ ೮ ಗಂಟೆಗೆ ಆರಂಭವಾದ ಚಿಕ್ಕ ಮಕ್ಕಳ ವೇಷಭೂಷಣ, ಕೃಷ್ಣಲೀಲೆಯ ವಿವಿಧ ರೂಪಕಗಳು, ನೃತ್ಯ, ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಕೃಷ್ಣ ವೇಷದಲ್ಲಿ ಸಂತೋಷ ಬೋಮಲೆ ಪಾತ್ರ ಆಕರ್ಷಣೆಯಾಗಿತ್ತು. ವಾರಕರಿ ಯವರು ಸಮಾಜ ಬಾಂಧವರು ಸಾಂಪ್ರದಾಯಿಕ ಅಷ್ಟಮಿಯ ಅಭಂಗ ಭಜನೆ, ಮಂಗಳಾರತಿಯ ನಂತರ ಕೃಷ್ಣನನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿ ಸಂಭ್ರಮಿಸಿದರು.

ಸಮಾಜದ ಶ್ರೇಷ್ಠ ನವಲೆ, ರಶ್ಮಿ ಮಹೇಂದ್ರಕರ, ಸಹನಾ ಟಿಕಾರೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಲಕ್ಷ್ಮೀಬಾಯಿ ಮಾತಾಡೆ, ಕಲಾವತಿ ಜಾಧವ್, ಸರೋಜಾ ಬಾಯಿ ನವಲೆ, ಲತಾ ಅಚಲಕರ, ನಂದಾ ನವಲೆ, ಮೀರಾ, ಲತಾ ಮಹೇಂದ್ರಕರ, ತ್ರಿವೇಣಿ, ರಾಣಿ, ನವಲೆ, ಪೂರ್ಣಿಮಾ, ಕವಿತಾ, ಜ್ಯೋತಿ, ಅಕ್ಷತಾ ಬೋಮಲೆ, ಲಕ್ಷ್ಮೀ ಬೇಂದ್ರೆ, ಧನು ಮಾತಾಡೆ, ಸಂತೋಷಿ ತಿರುಮಲೆ, ರಾಜೇಶ್ವರಿ, ವಿದ್ಯಾ, ಗಾಯತ್ರಿ, ಮಧು ಮಾಂಡ್ರೆ, ಪಲ್ಲವಿ ಸರ್ವದೆ, ಕಾಂಚನಾ ಹಾವಳೆ, ಹಭಪ ಪುಂಡಲೀಕ ಮಾತಾಡೆ, ಸತೀಶ ಮಾಂಡ್ರೆ, ಸಮಿತಿಯ ಮುಖಂಡರಾದ ಕಿರಣ ನವಲೆ, ಸಂತೋಷ ಸರ್ವದೆ, ಪ್ರಭು ಬೋಮಲೆ, ನಿವೃತ್ತಿ ತಾಂದಳೆ, ಸಂಜೀವ ಮಾಂಡ್ರೆ, ನಾಗರಾಜ ತಿರುಮಲೆ, ಪರಶುರಾಮ ಮೆಹರವಾಡೆ, ಪರಶುರಾಮ, ಪುಂಡಲೀಕ, ಉಮಾಕಾಂತ ಮುಂತಾದವರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here