ಬೆಂಗಳೂರು:- ಪಾಗಲ್ ಪ್ರೇಮಿಯೋರ್ವ ಹುಚ್ಚಾಟ ಮೆರೆದಿದ್ದು, ಪ್ರೀತಿ ನಿರಾಕರಿಸಿದ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯಪುರದಲ್ಲಿ ಜರುಗಿದೆ.
ರಾಹುಲ್ ಎಂಬ ಆರೋಪಿಯು, ಸ್ನೇಹಿತರ ಜೊತೆ ಬಂದು ಬೆಂಕಿ ಹಚ್ಚಿ, ಹಲ್ಲೆ ಎಸಗಿದ್ದಾರೆ. ಯುವತಿ ತನ್ನ ಪ್ರೀತಿಯನ್ನು ಪದೇ ಪದೇ ನಿರಾಕರಿಸುತ್ತಿದ್ದರಿಂದ ರೊಚ್ಚಿಗೆದ್ದ ರಾಹುಲ್ ಹಾಗೂ ಗ್ಯಾಂಗ್ ಕೃತ್ಯ ಎಸಗಿದ್ದಾರೆ. ಮೂರು ನಾಲ್ಕು ಬೈಕ್‌ಗಳಲ್ಲಿ ಗ್ಯಾಂಗ್ ಸಮೇತ ಬಂದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಮುಂದಿದ್ದ ಮನೆಯ ಮುಂದಿನ ಬೈಕ್ ಹಾಗೂ ಎರಡು ಕಾರುಗಳಿಗೆ ಬೆಂಕಿ ಇಟ್ಟಿದ್ದಾರೆ.
ಬಳಿಕ ಅಲ್ಲಿಂದ ಸುಬ್ರಮಣ್ಯಪುರ ಶ್ರೀನಿಧಿ ಅಪಾರ್ಟ್ಮೆಂಟ್ ಬಳಿ ತೆರಳಿದ್ದಾರೆ. ಈ ವೇಳೆ ಅಪಾರ್ಟ್ಮೆಂಟ್ ಬಳಿಯಿದ್ದ ಸೆಕ್ಯುರಿಟಿ ಗಾರ್ಡ್ ತಡೆಯಲು ಬಂದಾಗ ಆತನ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿದ್ದ ಕಾರುಗಳಿಗೆ ಕೂಡ ಬೆಂಕಿ ಇಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.