ಹಾವೇರಿ:- ಆಕ್ಸಿಜನ್ ಸಿಲಿಂಡರ್ ಸೋರಿಕೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಜರುಗಿದೆ.
Advertisement
ಆಕ್ಸಿಜನ್ ಸೋರಿಕೆಯ ವಾಸನೆ ಬರುತ್ತಿದ್ದಂತೆ ಗಾಬರಿಗೊಂಡ ಗರ್ಭಿಣಿಯರು ಮತ್ತು ರೋಗಿಗಳು ಹಾಗೂ ಸಂಬಂಧಿಕರು ಹೊರಗೆ ಓಡಿ ಬಂದಿದ್ದಾರೆ. ಈ ಮಧ್ಯ ಅಡುಗೆ ಅನಿಲ ಸೋರಿಕೆ ಆಗಿದೆ ಎಂದು ಸುದ್ದಿ ಹರಡಿ ಪರಸ್ಥಿತಿ ಮತ್ತಷ್ಟು ಬಿಗಡಾಯಿಸಿತು.
ಎದ್ದೋ, ಬಿದ್ದೋ ಎಂದು ಗರ್ಭಿಣಿಯರು, ಬಾಣತಿಯರು, ಮಕ್ಕಳು ಕರೆದುಕೊಂಡು ಹೊರಗೆ ಓಡಿ ಬಂದಿದ್ದಾರೆ.
ಹಸುಗೂಸು ಸಮೇತ ಬಾಣಂತಿಯರು ಓಡಿ ಆಸ್ಪತ್ರೆ ಹೊರಗೆ ಬಂದಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಸೋರಿಕೆ ಆದ ಆಕ್ಸೀಜನ್ ಸಿಲಿಂಡರ್ ಸರಿಪಡಿಸಿದ ನಂತರ ಆಸ್ಪತ್ರೆಯಲ್ಲಿ ಆತಂಕ ಕಡಿಮೆಯಾಗಿದೆ. ಸೋರಿಕೆಯಾಗಿದ್ದು ಅಡುಗೆ ಅನಿಲ ಅಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಸ್ಪಷ್ಟಪಡಿಸಿದ ನಂತರ ರೋಗಿಗಳು ಸಂಬಂಧಿಕರು ವಾರ್ಡ್ ಒಳಗೆ ಹೋಗಿದ್ದಾರೆ.