ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯಲ್ಲಿ ಪಿ.ಕೆ. ಇನೋವೆಟಿವ್ ಸಮ್ಮರ್ ಕ್ಯಾಂಪ್ ವತಿಯಿಂದ ಬೇಸಿಗೆ ರಜಾ ದಿನದಲ್ಲಿ ಮಕ್ಕಳಿಗೆ ಸೃಜನಶೀಲತೆ ಕಾರ್ಯಕ್ರಮಕ್ಕೆ ಬುಧವಾರ ಸಿಸಿಎನ್ ವಿದ್ಯಾಪ್ರಸಾರ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಂಪ್‌ನ ಅಧ್ಯಕ್ಷ ಪ್ರವೀಣಕುಮಾರ ಹಡಪದ, ಪ್ರಸ್ತುತ ಶಾಲೆಗಳಿಗೆ ರಜೆ ಇರುವುದರಿಂದ ಇಂತಹ ಸಂದರ್ಭದಲ್ಲಿ ಮಕ್ಕಳ ಬೆಳವಣಿಗೆಗೆ ಗತ್ಯವಿರುವ ಸೃಜನಶೀಲತೆ, ನಿರೂಪಣೆ, ರಂಗನಾಟಕ, ಚಿತ್ರಕಲೆ ಮತ್ತು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂತಹ ಕಾರ್ಯಕ್ರಮಗಳನ್ನು ನುರಿತ ತಜ್ಞರಿಂದ ನೀಡಲು ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿರಹಟ್ಟಿ-ಮುಂಡರಗಿ-ಲಕ್ಷ್ಮೇಶ್ವರ ತಾಲೂಕಾ ಕೇಂದ್ರಗಳಲ್ಲಿಯೂ ಸಹ ಶಿಬಿರ ಆಯೋಜಿಸಿದ್ದು, ಪೋಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಚಂದ್ರಕಾಂತ ನೂರಶೆಟ್ಟರ, ಶಿಕ್ಷಕಿ ವಿಜಯಲಕ್ಷ್ಮೀ ಮಾಲಸೂರೆ, ಕೆ.ಎ. ಬಳಿಗಾರ, ಅಶೋಕ ರಾಟಿಮನಿ, ಅನಸೂಯಾ ಡಂಬಳ, ರಾಜೇಶ್ವರಿ ಹಡಪದ, ಮಂಜುನಾಥ, ಅಂಜನಾ ಮುಂತಾದವರು ಉಪಸ್ಥಿತರಿದ್ದರು.