ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮನೋರಮಾ ಕಾಲೇಜಿನ ಬಿ.ಕಾಂ, ಬಿ.ಸಿ.ಎ., ಬಿ.ಬಿ.ಎ. ವಿದ್ಯಾರ್ಥಿಗಳಿಗೆ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಪಂದ್ಯಾವಳಿ ಉದ್ಘಾಟಿಸಿದ ಸಂಸ್ಥೆಯ ಆಡಳಿತಾಧಿಕಾರಿ ಕಿಶೋರ ಮುದಗಲ್ಲ ಮಾತನಾಡಿ, ಆಟದಲ್ಲಿ ಸೋಲು-ಗೆಲುವು ಸಹಜ. ಆತ್ಮವಿಶ್ವಾಸದಿಂದ ಆಡಿ ಎಂದು ಹೇಳುತ್ತಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಮೂರು ವಿಭಾಗಗಳಿಂದ ತಂಡಗಳನ್ನು ರಚಿಸಿ ಕ್ರೀಡೆಗೆ ಚಾಲನೆ ನೀಡಲಾಯಿತು. ಬಿಕಾಂ ವಿದ್ಯಾರ್ಥಿಗಳ ವಿಜಯಶಾಲಿಯಾದ ತಂಡ ಜಯ ಸಾಧಿಸಿದರೆ, ಬಿ.ಸಿ.ಎ. ವಿದ್ಯಾರ್ಥಿಗಳು ರನ್ನರ್ ಅಪ್ ಆದರು. ಪ್ರಾಚಾರ್ಯ ಬಿ.ಎಸ್. ಹಿರೇಮಠ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಿರ್ಣಾಯಕರಾಗಿ ಸಲ್ಮೋನ್ ಹಾಗೂ ಅಕ್ಷಯ ಕಾರ್ಯನಿರ್ವಹಿಸಿದರು.
ಈ ಸಂಧರ್ಭದಲ್ಲಿ ಆದಿತ್ಯ ಜೋಶಿ, ಸಂಯೋಜಕರಾದ ಪ್ರೊ. ಸವಿತಾ ಪೂಜಾರ, ಪ್ರೊ. ಅಲ್ವಿನಾ ಡಿ., ಪ್ರೊ. ಚೈತ್ರಾ ಡಿ., ಪ್ರೊ. ಶಾಹಿದಾ ಶಿರಹಟ್ಟಿ, ದೈಹಿಕ ನಿರ್ದೇಶಕರಾದ ಖಯೂಮ ನವಲೂರ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.