ಹುಬ್ಬಳ್ಳಿ:– ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದಲ್ಲಿ ಹಳೆ ದ್ವೇಷಕ್ಕೆ ಸಂಬಂಧಿಯನ್ನೇ ಯುವಕನೋರ್ವ ಕೊಲೆಗೈದ ಘಟನೆ ಜರುಗಿದೆ.
Advertisement
50 ವರ್ಷದ ರುದ್ರಪ್ಪ ಅವಾರಿ ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿಯನ್ನು 26 ವರ್ಷದ ಪ್ರಶಾಂತ ಅವಾರಿ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ವಿಚಾರಕ್ಕೆ ಖ್ಯಾತೆ ತೆಗೆದು ಪ್ರಶಾಂತ ಅವಾರಿ ಮೊದಲು ಜಗಳ ತೆಗೆದಿದ್ದ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಇಬ್ಬರು ಬಡಿದಾಡಿಕೊಂಡಿದ್ದಾರೆ. ಈ ವೇಳೆ ರುದ್ರಪ್ಪನಿಗೆ ಗಂಭೀರವಾಗಿ ಗಾಯಗೊಂಡಿತ್ತು.
ಗಂಭೀರವಾಗಿ ಗಾಯಗೊಂಡ ರುದ್ರಪ್ಪನನ್ನ ಚಿಕಿತ್ಸೆಗೆಂದು ಕೆಎಂಸಿಆರ್ ಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.