ಹಾವೇರಿ:– ತಾಳಿ ಕಟ್ಟಿದ ಗಂಡನನ್ನೇ ಸಿನಿಮಾ ಶೈಲಿಯಲ್ಲಿ ಮೂರನೇ ಪತ್ನಿ ಕೊಲೆಗೈದ ಘಟನೆ ಹಾವೇರಿಯಲ್ಲಿ ಜರುಗಿದೆ.
ಕೋಟಿ ಒಡೆಯನಾಗಿದ್ದ ಮಂಜುನಾಥ ಶಿವಪ್ಪ ಜಾದವ್ (45)ಕೊಲೆಯಾದ ದುರ್ದೈವಿ. ಈತ ಮೂಡಸಾಲಿ ಗ್ರಾಮದ ನಿವಾಸಿ ಎನ್ನಲಾಗಿದೆ. ಮಧು ಮತ್ತು ಪುತ್ರರಾದ ವಿನಯ್,ವಿಕಾಸ್ ರಿಂದ ಕೃತ್ಯ ನಡೆದಿದ್ದು, ಬಂಕಾಪೂರದಲ್ಲಿ ಹೆಣ ಬಿಸಾಕಿ ಎಸ್ಕೇಪ್ ಆಗಿದ್ದರು.
ಮೃತ ಮಂಜುನಾಥ್, 14 ವರ್ಷದ ಹಿಂದೆ ಮಧು ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಬಳಿಕ ಅನೈತಿಕ ಸಂಬಂಧ ಮದುವೆಯಾಗಿ ಕನ್ಸರ್ಟ್ ಆಗಿತ್ತು. ಆದಾದ ಬಳಿಕ ಪತ್ನಿ ಮದುಗೆ ಬ್ಯೂಟಿಪಾರ್ಲರ್ ಶಾಪ್ ಹಾಕಿಕೊಟ್ಟಿದ್ದ. ಅಷ್ಟೇ ಅಲ್ಲದೆ ಬರೋಬ್ಬರಿ 2 ಕೋಟಿ ರುಪಾಯಿ ಅಡಿಕೆ ತೋಟ ಮಾರಾಟ ಮಾಡಿ ಆಕೆಯನ್ನ ಸಾಕಿದ್ದ. ಇಷ್ಟಾದ್ರೂ ಬೇರೊಬ್ಬರ ಜೊತೆ ಮಧು ಅನೈತಿಕ ಸಂಬಂಧ ಹೊಂದಿದ್ದಳು. ಇದರಿಂದ ಮಧು ಮೇಲೆ ಶಂಕಿಸಿ ಮನೆಗೆ ಸಿಸಿ ಕ್ಯಾಮರಾ ಅಳವಡಿಸಿದ್ದ. ಸಿಸಿಟಿವಿಯಲ್ಲಿ ಕ್ಯಾಮರಾ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ಆಗುತ್ತಿತ್ತು.
ಕೊನೆಯದಾಗಿ ಶನಿವಾರ ದಿನ 3ನೇ ಹೆಂಡ್ತಿ ಮಧು ಮನೆಗೆ ಮೃತ ಮಂಜುನಾಥ್ ತೆರಳಿದ್ದ. ಈ ವೇಳೆ ಮನೆಯಲ್ಲಿಯೇ ಮಂಜುನಾಥ ನನ್ನು ಆರೋಪಿಗಳು ಕೊಲೆಗೈದು, ಕಾರಿನಲ್ಲಿ ಹೆಣ ಸಾಗಸಿದ್ದರು. ಬಳಿಕ ಬಂಕಾಪೂರ ಹೊರವಲಯದಲ್ಲಿ ಹೆಣ ಬಿಸಾಡಿ ಎಸ್ಕೇಪ್ ಆಗಿದ್ದರು. ಆ ಬಳಿಕ ಇದು ಅಪಘಾತವೆಂದು ಬಿಂಬಿಸಲು ಆರೋಪಿಗಳು ಹೊರಟಿದ್ದರು. ಅನುಮಾನದ ಮೇರೆಗೆ ಪತ್ನಿ ಮಧು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಬಗ್ಗೆ ಆಕೆ ಸತ್ಯ ಒಪ್ಪಿಕೊಂಡಿದ್ದಾರೆ.
ಬಂಕಾಪೂರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.