Crime News: ಹಾಲೋ ಬ್ರಿಕ್ಸ್ ನಿಂದ ತಲೆ ಜಜ್ಜಿ ವ್ಯಕ್ತಿಯ ಭೀಕರ ಕೊಲೆ!

0
Spread the love

ದೊಡ್ಡಬಳ್ಳಾಪುರ:- ವ್ಯಕ್ತಿಯೊಬ್ಬನ ತಲೆಯನ್ನು ಹಾಲೋ ಬ್ರಿಕ್ಸ್ ನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರ ಹೊರವಲಯದ ಬಾಶೆಟ್ಟಿಹಳ್ಳಿ ಬಳಿ ಜರುಗಿದೆ.

Advertisement

ಬುಧವಾರ ರಾತ್ರಿ ಸುಮಾರು 12ಗಂಟೆಯಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಬುಲೆಟ್ ರಘು ಎಂದು ಗುರುತಿಸಲಾಗಿದೆ. ಇವರು ಮೃತನನ್ನು ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರ ನಿವಾಸಿ ಎನ್ನಲಾಗಿದೆ.

ಬುಲೆಟ್ ರಘು ಕಳೆದ ಆರೇಳು ವರ್ಷಗಳಿಂದ ಬೆಳಗಾವಿಯಲ್ಲಿ ಖಾನಾವಳಿ ಇಟ್ಟುಕೊಂಡಿದ್ದ, ಪ್ರೇಮ ವಿವಾಹವಾಗಿ ಬೆಳಗಾವಿಯಲ್ಲೇ ವಾಸವಿದ್ದ. ಬೆಳಗಾವಿಯಿಂದ ಒಂದು ವಾರದ ಹಿಂದಷ್ಟೇ ದೊಡ್ಡಬಳ್ಳಾಪುರಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.

ಈ ಹಿಂದೆ ಇಬ್ಬರ ಜೊತೆ ಗಲಾಟೆ ಮಾಡಿಕೊಂಡಿದ್ದ. ಆ ಗಲಾಟೆ ವಿಷಯ ರಾಜಿ ಸಂಧಾನವಾಗಿತ್ತು. ನಿನ್ನೆ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ನಾನು ಸ್ನೇಹಿತರ ಜೊತೆ ಹೊರಗೆ ಹೋಗುತ್ತೇನೆಂದು ತನ್ನ ತಾಯಿಗೆ ಹೇಳಿ ಹೋಗಿದ್ದಾನೆ. ಮನೆಯಿಂದ ಹೊರ ಹೋದವನು ಕೊಲೆಯಾಗಿದ್ದಾನೆ. ಸದ್ಯ ಈತನ ಗೆಳೆಯರು ಯಾರು ? ಕೊಲೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಪೊಲೀಸರಿಂದ ತನಿಖೆ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here