ಹಾಸನ: ಚಿನ್ನಾಭರಣಕ್ಕಾಗಿ ಒಂಟಿ ವೃದ್ಧೆಯನ್ನು ಉಸಿರುಗಟ್ಟಿಸಿ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣದ, ರೇವಣ್ಣ ಸರ್ಕಲ್ ಬಳಿ ಜರುಗಿದೆ. ಕಮಲಮ್ಮ (68) ಕೊಲೆಯಾದ ವೃದ್ದೆ.
ಐದು ವರ್ಷಗಳ ಹಿಂದೆ ಇದೇ ಮನೆಯಲ್ಲಿ ಖದೀಮರು ಕಮಲಮ್ಮರ ಚಿನ್ನದ ಸರಗಳ್ಳತನ ಮಾಡಿದ್ದರು. ಅದರಂತೆ ನೆನ್ನೆ ಮನೆಗೆ ನುಗ್ಗಿ ಮಹಿಳೆಯನ್ನು ಪಾತಕಿಗಳು, ಕೊಲೆಗೈದಿದ್ದಾರೆ. ಚಿನ್ನಾಭರಣಕ್ಕಾಗಿ ಅಪರಿಚಿತರು ಮನೆಗೆ ನುಗ್ಗಿದ್ದಾರೆ. ಮೃತದೇಹ ನೋಡಿ ಅನಾರೋಗ್ಯ ದಿಂದ ಸಾವಿಗೀಡಾಗಿದ್ದಾರೆಂದು ಸಂಬಂಧಿಕರು ಭಾವಿಸಿದ್ದರು. ಮೈಮೇಲೆಒಡವೆ ಇಲ್ಲದಿರೋದನ್ನ ಗಮನಿಸಿದಾಗ ಕೊಲೆ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೂಡಲೆ ಪೊಲೀಸರಿಗೆ ಸಂಬಂಧಿಕರು ಮಾಹಿತಿ ನೀಡಿದರು. ಮರಣೊತ್ತರ ಪರೀಕ್ಷೆ ಗಾಗಿ ಶವವನ್ನು ಹಾಸನದ ಹಿಮ್ಸ್ ಗೆ ರವಾನೆ ಮಾಡಲಾಗಿದೆ. ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



