ಬೆಂಗಳೂರು:- ಬೆಂಗಳೂರಿನ ತಿಲಕ್ನಗರ ಮುಖ್ಯರಸ್ತೆಯಲ್ಲಿ 4 ಮಕ್ಕಳ ತಾಯಿಯನ್ನು ಕೊಂದು ಆಟೋದಲ್ಲಿ ಶವವಿಟ್ಟು ಪ್ರಿಯಕರ ಪರಾರಿ ಆಗಿರುವಂತಹ ಘಟನೆ ಜರುಗಿದೆ.
35 ವರ್ಷದ ಸಲ್ಮಾ ಮೃತ ಮಹಿಳೆ. ಪ್ರಿಯಕರ ಸುಬ್ಬುಮಣಿ ಕೊಲೆ ಆರೋಪಿ. ಆಟೋದಲ್ಲಿ ಮೃತದೇಹ ಇದ್ದುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೇಸ್ ದಾಖಲಿಸಿಕೊಂಡು ತಿಲಕ್ನಗರ ಠಾಣೆ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.
ಘಟನೆ ವಿವರ:-
ಆರೋಪಿ ಸುಬ್ಬುಮಣಿ ತಿಲಕ್ನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ. ಪತಿ ಮೃತಪಟ್ಟ ನಂತರ ಸುಬ್ಬುಮಣಿ ಜೊತೆ ಸಲ್ಮಾ ಸಲುಗೆಯಿಂದ ಇದ್ದರು. ನಿನ್ನೆ ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಸುಬ್ಬುಮಣಿ, ಸಲ್ಮಾ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಸಲ್ಮಾ ಮೃತದೇಹಕ್ಕೆ ಬಟ್ಟೆಸುತ್ತಿ ಕೆಟ್ಟುನಿಂತಿದ್ದ ಆಟೋದಲ್ಲಿಟ್ಟು ಪರಾರಿ ಆಗಿದ್ದಾನೆ.
ಆಟೋದಲ್ಲಿ ಮೃತದೇಹ ಇದ್ದುದನ್ನು ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ, ತಿಲಕ್ನಗರ ಠಾಣೆ ಪೊಲೀಸರು ಪರಿಶೀಲಿಸಿದ್ದರು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಸಲ್ಮಾ ಶವ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.


