ಮಂಡ್ಯ:- ಗ್ಯಾಸ್ ಕಟರ್ ಬಳಸಿ ಒಡವೆ ಅಂಗಡಿ ರಾಬರಿ ಮಾಡುವ ವೇಳೆ ಈ ಕಳ್ಳತನ ನೋಡಿದ ಹೋಟೆಲ್ ಮಾಲೀಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಜರುಗಿದೆ.
ಮಹದೇವಪ್ಪ(55)ಕೊಲೆಯಾದ ದುರ್ದೈವಿ. ಖದೀಮರು ಗ್ಯಾಸ್ ಕಟರ್ ಬಳಸಿ ಜ್ಯುವಲರಿ ಅಂಗಡಿಗೆ ಕನ್ನ ಹಾಕುವ ವೇಳೆ ಪಕ್ಕದಲ್ಲಿದ್ದ ಹೊಟೇಲ್ ಮಾಲೀಕ ಹೊರಗಡೆ ಬಂದಿದ್ದನ್ನು ನೋಡಿದ ದುಷ್ಕರ್ಮಿಗಳಿಂದ ಈ ಹತ್ಯೆ ನಡೆದಿದೆ. ವ್ಯಕ್ತಿಯನ್ನು ಹತ್ಯೆ ಮಾಡಿ ಜ್ಯುವಲರಿ ಅಂಗಡಿಯಲ್ಲಿ ಆಭರಣ ಕದ್ದು ಪರಾರಿ ಆಗಿದ್ದಾರೆ. ಸ್ಥಳಕ್ಕೆ ಕಿರುಗಾವಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶ್ವಾನದಳ ಮತ್ತು ಬೆರಳಚ್ಚು ತಂಡದಿಂದ ತಪಾಸಣೆ ನಡೆದಿದೆ.
ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



