ಬೆಂಗಳೂರು:– ಆಸ್ತಿಗಾಗಿ ಸ್ನೇಹಿತನೊಂದಿಗೆ ಸೇರಿ ತಂದೆಯನ್ನೇ ಪಾಪಿ ಮಗ ಕೊಲೆಗೈದಿರುವ ಘಟನೆ ನಗರದ ಬಗಲಗುಂಟೆಯಲ್ಲಿ ಜರುಗಿದೆ.
ಮಗನ ಮರ್ಡರ್ ಮಿಸ್ಟ್ರಿ ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಬಯಲಾಗಿದೆ. ಮಂಜಣ್ಣ ಮೃತ ದುರ್ದೈವಿ. ಇವರು ದಾಸರಹಳ್ಳಿಯ ಕೆಂಪೇಗೌಡ ನಗರದ ಉದ್ಯಮಿ ಎನ್ನಲಾಗಿದೆ. ಮಗ ಮನೋಜ್ ಹಾಗೂ ಆತನ ಸ್ನೇಹಿತ ಕೊಲೆ ಮಾಡಿದ ಆರೋಪಿಗಳು. ಸೆ.2 ರಂದು ದಾಸರಹಳ್ಳಿಯ ಕೆಂಪೇಗೌಡ ನಗರದಲ್ಲಿ ಉದ್ಯಮಿ ಮಂಜಣ್ಣ ಮನೆಯಲ್ಲಿ ಮಲಗಿದ್ದ ಜಾಗದಲ್ಲೇ ಮೃತಪಟ್ಟಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂತಾ ಮನೆಯವರು ಕೂಡ ಅಂತ್ಯಕ್ರಿಯೆ ಮಾಡಿದ್ರು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಇದೊಂದು ಕೊಲೆ ಅನ್ನೋದು ಗೊತ್ತಾಗಿದೆ.
ಒಳ್ಳೆಯ ಸ್ಥಿತಿವಂತರಾಗಿದ್ದ ಮಂಜಣ್ಣ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ದೊಡ್ಡ ಮಗ ಮನೋಜ್ ಕೆಲಸ ಕಾರ್ಯ ಮಾಡದೆ ಸುತ್ತಾಡಿಕೊಂಡಿರುತ್ತಿದ್ದ. ಹೀಗಾಗಿ ತಂದೆ, ಮಗನಿಗೆ ಆಗಾಗ ಬುದ್ಧಿ ಹೇಳ್ತಿದ್ದರು. ಇದರಿಂದ ಮಗ ಮನೋಜ್, 5 ವರ್ಷದ ಹಿಂದೆಯೇ ಅಪ್ಪನನ್ನ ಕೊಂದು ಆಸ್ತಿ ಹೊಡೆಯೋ ಪ್ಲಾನ್ ಮಾಡಿದ್ದ. ಹೀಗಾಗಿ ಸ್ನೇಹಿತ ಪ್ರವೀಣ್‌ಗೆ 15 ಲಕ್ಷ ರೂ. ಸುಪಾರಿ ನೀಡಿ, 15,000 ರೂ. ಹಣವನ್ನು ಅಡ್ವಾನ್ಸ್ ಆಗಿ ನೀಡಿದ್ದ.
ಸೆ.2 ರಂದು ವುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ತಂದೆಯನ್ನು, ಮನೋಜ್ ವಿಶಾಂತ್ರಿ ತೆಗೆದುಕೊಳ್ಳಿ ಎಂದು ಹೇಳಿ ಮನೆಗೆ ಕಳುಹಿಸಿದ್ದ. ಮಂಜಣ್ಣ ಮನೆಯಲ್ಲಿ ಸೋಫಾ ಮೇಲೆ ಮಲಗಿದ್ದಾಗ ಮದ್ಯಪಾನ ಮಾಡಿ, ಮನೋಜ್ ಹಾಗೂ ಆತನ ಸ್ನೇಹಿತ ಪ್ರವೀಣ್ ಬಂದಿದ್ದರು. ಈ ವೇಳೆ ಇಬ್ಬರು ಸೇರಿ ಟವಲ್‌ನಿಂದ ಮಂಜಣ್ಣನ ಕುತ್ತಿಗೆಗೆ ಬಿಗಿದು ಕೊಂದಿದ್ದರು. ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಬಿಂಬಿಸಿದ್ರು. ಆದ್ರೆ ಮೃತದೇಹವನ್ನು ಕಂಡ ಪೋಲಿಸರಿಗೆ ಆಗಲೇ ಅನುಮಾನ ಶುರುವಾಗಿತ್ತು. ಇದೀಗ ಮರಣೋತ್ತರ ವರದಿಯಲ್ಲಿ ಮಗನ ಬಂಡವಾಳ ಬಯಲಾಗಿದೆ.
ಘಟನೆ ಬಳಿಕ ಆರೋಪಿ ಮಗ ಎಸ್ಕೇಪ್ ಆಗಿದ್ದಾನೆ. ಸದ್ಯ ಪೊಲೀಸರು ಕೊಲೆಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮನೋಜ್ ಗಾಗಿ ಶೋಧ ಕೈಗೊಂಡಿದ್ದಾರೆ.