Crime News; ಪತಿಯನ್ನೇ ಭೀಕರವಾಗಿ ಕೊಲೆಗೈದ ಪಾಪಿ ಪತ್ನಿ!

0
Spread the love

ಹೈದರಾಬಾದ್:- ಪಾಪಿ ಹೆಂಡ್ತಿಯೋರ್ವಳು ತನ್ನ ಪತಿಯನ್ನೇ ಭೀಕರವಾಗಿ ಕೊಲೆಗೈದ ಘಟನೆ ಹೈದರಾಬಾದ್​ನ ಕೋಕಾಪೇಟ್‌ನಲ್ಲಿ ಜರುಗಿದೆ.

Advertisement

ದಂಪತಿಗಳ ನಡುವೆ ಹಿಂಸಾತ್ಮಕ ವಾಗ್ವಾದ ನಡೆದು, ಅದು ದೈಹಿಕ ಹಲ್ಲೆಗೆ ಕಾರಣವಾಯಿತು. ಈ ವೇಳೆ ನಡೆದ ಜಗಳದ ಸಮಯದಲ್ಲಿ ಪತ್ನಿ ತನ್ನ ಪತಿಗೆ ಚಾಕುವಿನಿಂದ ಇರಿದಿದ್ದಾಳೆ ಎಂದು ಹೇಳಲಾಗಿದೆ. ಇದರಿಂದ ಆತ ಕಿರುಚಿಕೊಂಡಿದ್ದಾರೆ. ಆ ಕಿರುಚಾಟ ಕೇಳಿ, ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.

ವೈದ್ಯರು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಸಾವನ್ನಪ್ಪಿದ್ದಾರೆ. ದಂಪತಿಗಳು ಅಸ್ಸಾಂ ಮೂಲದವರು ಎಂದು ಪೊಲೀಸರು ಗುರುತಿಸಿದ್ದಾರೆ. ಹೈದರಾಬಾದ್‌ನ ಉಪನಗರವಾದ ಕೋಕಾಪೇಟ್‌ನಲ್ಲಿ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.

ಪತ್ನಿಯೊಬ್ಬಳು ಮಲಗಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ನಿನ್ನೆ ರಾತ್ರಿ ದಂಪತಿಯ ನಡುವಿನ ಜಗಳ ಕೊಲೆಗೆ ಕಾರಣವಾಗಿತ್ತು. ಗಂಭೀರವಾಗಿ ಗಾಯಗೊಂಡ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ನರಸಿಂಗಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here