ಬಾಗಲಕೋಟೆ:- ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ಅಂಗನವಾಡಿಗೆ ಹೊರಟಿದ್ದ ಮಗುವನ್ನು ಚಿಕ್ಕಪ್ಪನೇ ಎತ್ತಿಕೊಂಡು ಹೋಗಿ ಕತ್ತು ಸೀಳಿ ಕೊಲೆಗೈದ ಘಟನೆ ಜರುಗಿದೆ.
Advertisement
ಭೀಮಪ್ಪ ಕೊಲೆ ಆರೋಪಿ. ಈ ಹಿಂದೆ ಹೆಂಡತಿ ಮೇಲೆ ಹಲ್ಲೆ ಮಾಡಬೇಡ ಎಂದು ಭೀಮಪ್ಪನಿಗೆ ಆತನ ಸಹೋದರ ಮಾರುತಿ ಬುದ್ಧಿ ಹೇಳಿದ್ದರು. ಇದರಿಂದ ದ್ವೇಷಕಾರುತ್ತಿದ್ದ ಭೀಮಪ್ಪ ಮಾರುತಿ ಅವರ ಪುತ್ರನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ, ಮಗುವನ್ನು ಕರೆದೊಯ್ದು ಕೊಲೆಗೈದಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ನೀಡಿ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.