ನವದೆಹಲಿ:- ಲೈಂಗಿಕವಾಗಿ ತೃಪ್ತಿಪಡಿಸದ ಗಂಡನನ್ನೇ ಹೆಂಡ್ತಿ ಕೊಲೆಗೈದಿರುವ ಆಘಾತಕಾರಿ ಘಟನೆ ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ಜರುಗಿದೆ.
ಆಕೆಯ ಗಂಡ ಆಕೆಗೆ ಲೈಂಗಿಕ ಸುಖ ನೀಡುತ್ತಿರಲಿಲ್ಲ ಎಂಬ ಕಾರಣದಿಂದ ಅವರಿಬ್ಬರ ನಡುವೆ ನಿತ್ಯ ಜಗಳವಾಗುತ್ತಿತ್ತು. ಗಂಡನ ನಿರ್ಲಕ್ಷ್ಯ, ಲೈಂಗಿಕ ಕ್ರಿಯೆಯಲ್ಲಿನ ನಿರಾಸಕ್ತಿಯಿಂದ ಬೇಸತ್ತ ಆ ಮಹಿಳೆ ತನ್ನ ಕಸಿನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಕೊನೆಗೆ ತನ್ನ ಸಂಬಂಧಕ್ಕೆ ಅಡ್ಡ ಬರುತ್ತಾನೆಂದು ಆಕೆ ಗಂಡನನ್ನು ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಕಟ್ಟಿದ್ದಾಳೆ.
ಪೊಲೀಸರ ಪ್ರಕಾರ, ಜುಲೈ 20ರ ಸಂಜೆ 4.15ರ ಸುಮಾರಿಗೆ ನಿಹಾಲ್ ವಿಹಾರ್ ಪೊಲೀಸ್ ಠಾಣೆಗೆ ಸ್ಥಳೀಯ ಆಸ್ಪತ್ರೆಯಿಂದ ಕರೆ ಬಂದಿದ್ದು, ಮಹಿಳೆಯೊಬ್ಬರು ಮೊಹಮ್ಮದ್ ಶಾಹಿದ್ ಎಂಬ ಗುರುತಿಸಲಾದ ತನ್ನ ಪತಿಯನ್ನು ಹಲವಾರು ಇರಿತದ ಗಾಯಗಳೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ. ಆ ವ್ಯಕ್ತಿ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಪೊಲೀಸರು ಆಸ್ಪತ್ರೆಗೆ ತಲುಪಿದಾಗ, ಆ ಮಹಿಳೆ ತನ್ನ ಪತಿ ತನ್ನನ್ನು ತಾನೇ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ ಎಂದು ಹೇಳಿದ್ದಾಳೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿಯು ಗಾಯಗಳು ಮುಂಭಾಗದಿಂದ ದಾಳಿ ನಡೆದಿದೆ ಎಂದು ಇದ್ದುದರಿಂದ ಆತ ತನಗೆ ತಾನೇ ಇರಿದುಕೊಂಡಿದ್ದು ಸುಳ್ಳು ಎಂಬುದು ಗೊತ್ತಾಯಿತು. ಇದರ ನಂತರ, ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಹೆಂಡ್ತಿಯ ಕರಾಳ ಮುಖ ಬೆಳಕಿಗೆ ಬಂದಿದೆ.