ಬೆಂಗಳೂರು:- ದುಷ್ಕರ್ಮಿಗಳು ಅನಧಿಕೃತವಾಗಿ ಮರವೊಂದನ್ನು ತುಂಡು ತುಂಡಾಗಿ ಕತ್ತರಿಸಿರುವ ಘಟನೆ ಬೆಂಳೂರಿನ 2ನೇ ಮುಖ್ಯರಸ್ತೆ ಭೂಪಸಂದ್ರದ ಹೊಸ ಬಡಾವಣೆಯಲ್ಲಿ ಜರುಗಿದೆ.
ತಮ್ಮ ಸ್ವಾರ್ಥಕ್ಕಾಗಿ ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕರಿಗೆ ನೆರವಾಗಬೇಕಿದ್ದ ಮರವನ್ನು ಏಕಾಏಕಿ ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಈ ಬಗ್ಗೆ ಪರಿಸರ ಪ್ರೇಮಿಗಳು ಹಾಗೂ ಕೆಲವು ಸಂಘಟನೆಗಳು ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ.
ಬೆಂಗಳೂರು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿ ದ್ದಾರ ಎಂಬ ಸಂಶಯ ವ್ಯಕ್ತವಾಗಿದೆ. ಒಟ್ಟಾರೆ ಜನಗಳಿಗೆ ಶುದ್ಧ ಗಾಳಿ, ನೆರಳು ಕೊಡುತ್ತಿದ್ದ ಮರವನ್ನು ಏಕಾಏಕಿ ಕಡಿದಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.



