ಬೆಂಗಳೂರು: ವಿಜಯೇಂದ್ರರನ್ನ ಟೀಕೆ ಮಾಡೋದು ಮೋದಿ, ಅಮಿತ್ ಶಾ ನಡ್ಡಾರನ್ನ ಟೀಕೆ ಮಾಡಿದಂತೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿಜಯೇಂದ್ರರನ್ನ ನೀವು ಕುಗ್ಗಿಸಲು ಆಗಲ್ಲ. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿ ಪಕ್ಷ ಕಟ್ಟಿದ್ರು. ಅದೇ ರೀತಿ ವಿಜಯೇಂದ್ರ ನಾಡಿನ ಯುವಕರ ಕಣ್ಮಣಿ ಆಗಿದ್ದಾರೆ.
ಅಂಥವರ ಬಗ್ಗೆ ಮಾತಾಡ್ತೀರ? ಮುಂದಿನ ವಾರ ನಾವು ಮತ್ತೆ ಸಭೆ ಮಾಡ್ತೀವಿ. 100ಕ್ಕೂ ಹೆಚ್ಚು ಜನ ಸೇರಿ ದೊಡ್ಡ ಸಭೆ ಮಾಡ್ತೀವಿ. ಪಕ್ಷ ಕಟ್ಟೋ ಶಕ್ತಿ ವಿಜಯೇಂದ್ರಗೆ ಮಾತ್ರ ಇದೆ ಅನ್ನೋದು ನಿಜ. ವಿಜಯೇಂದ್ರರನ್ನ ಟೀಕೆ ಮಾಡೋದು ಮೋದಿ, ಅಮಿತ್ ಶಾ ನಡ್ಡಾರನ್ನ ಟೀಕೆ ಮಾಡಿದಂತೆ ಎಂದು ನುಡಿದಿದ್ದಾರೆ.
ನಮ್ಮ ಒಳಜಗಳದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ವಿಜಯೇಂದ್ರರನ್ನು ಕೆಳಗಿಳಿಸಿದರೆ ಬಿಜೆಪಿಗೆ ಹತ್ತು ಸೀಟೂ ಬರಲ್ಲ. ಹೈಕಮಾಂಡ್ ವಿಜಯೇಂದ್ರರನ್ನ ಕೆಳಗಿಳಿಸಲ್ಲ, ಅವರೇ ಮುಂದುವರೀತಾರೆ ಅನ್ನೋ ವಿಶ್ವಾಸ ಇದೆ ಎಂದರು.