ಬೆಳೆ ಪದ್ಧತಿ ಆಧಾರಿತ ತರಬೇತಿ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಯಲಿಶಿರೂರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಬೆಳೆ ಪದ್ಧತಿ ಆಧಾರಿತ ತರಬೇತಿ ಕಾರ್ಯಕ್ರಮ ಹಾಗೂ ನ್ಯಾನೋ ಯುರಿಯಾ ಡ್ರೋನ್ ಸಿಂಪರಣೆ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮದಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಎಲಿ, ಗ್ರಾಮದ ಹಿರಿಯರಾದ ಫಕೀರಗೌಡ ಪಾಟೀಲ, ಪರಶುರಾಮ ಹೂಗಾರ, ಮಲ್ಲಪ್ಪ ಹೊನ್ನಪ್ಪನವರ, ಶರಣಪ್ಪ ಡೋಣಿ ಉದಯ ಹೊನ್ನಪ್ಪನವರ ಭಾಗವಹಿಸಿದ್ದರು. ಡ್ರೋನ್ ಪ್ರಾತ್ಯಕ್ಷಿಕೆಯನ್ನು ಯಲ್ಲಪ್ಪ ಬಾಬಣ್ಣವರ ಇವರ ಹೊಲದಲ್ಲಿ ಆಯೋಜಿಸಲಾಗಿತ್ತು. ಡ್ರೋನ್ ಬಳಸಿ ನ್ಯಾನೋ ಯುರಿಯಾ ಸಿಂಪರಣೆ ಕಾರ್ಯಕ್ರಮಕ್ಕೆ ಸಂಸ್ಥೆಯ ಸಚಿನ್ ಸಹಯೋಗ ನೀಡಿದರು.

ತೀವ್ರ ರಸಗೊಬ್ಬರ ಬಳಕೆಯಿಂದ ಮಣ್ಣಿನ ಮೇಲಾಗುವ ದುಷ್ಪರಿಣಾಮಗಳನ್ನು ತಪ್ಪಿಸಲು ನ್ಯಾನೋ ರಸಗೊಬ್ಬರಗಳನ್ನು ಬಳಸಲು ಹಾಜರಿದ್ದ ಸಹಾಯಕ ಕೃಷಿ ನಿರ್ದೇಶಕರಾದ ಮಲ್ಲಯ್ಯ ಕೊರವನವರ ವಿನಂತಿಸಿದರು. ಕೃಷಿ ಅಧಿಕಾರಿ ರಾಜೇಶ್ವರಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಇಂಗಳಳ್ಳಿ ಹಾಗೂ ಗುರಿಕಾರ್ ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here