ಹೊಸವರ್ಷದ ಹರುಷ: ಒಂದೇ ದಿನದಲ್ಲಿ BMTCಗೆ ಹರಿದು ಬಂತು ಕೋಟಿ-ಕೋಟಿ ಆದಾಯ!?

0
Spread the love

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಹೊಸವರ್ಷದ ಸಂಭ್ರಮದ ನಡುವೆಯೇ BMTCಗೆ ಕೋಟಿ-ಕೋಟಿ ಆದಾಯ ಹರಿದು ಬಂದಿದೆ.

Advertisement

ಡಿ.31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡಿದ್ದವು. ಬಿಎಂಟಿಸಿಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು.

ನಿನ್ನೆ ಒಂದೇ ದಿನ 35 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದರು. ಈ ಹಿನ್ನೆಲೆ ಬಿಎಂಟಿಸಿಗೆ 5 ಕೋಟಿ ಹಣ ಕಲೆಕ್ಷನ್ ಆಗಿದೆ. ಒಟ್ಟು 35,70,842 ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಇದರಿಂದ ಬಿಎಂಟಿಸಿಗೆ ಒಟ್ಟು 5.48 ಕೋಟಿ ರೂ. ಸಂಗ್ರಹ ಆಗಿದೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here