ಚಿಕ್ಕಮಗಳೂರು: ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿದ್ದ ಸಿ.ಟಿ.ರವಿ ಅವರು, ಜಾಮೀನನ್ನು ಪಡೆದು ಆಚೆ ಬಂದಿದ್ದರು. ಸಿ.ಟಿ.ರವಿಯವರ ಸ್ವಾಗತಕ್ಕೆ ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರು ಅದ್ಧೂರಿ ಸ್ವಾಗತವನ್ನು ಹಮ್ಮಿಕೊಂಡಿದ್ದರು.
ಈ ವೇಳೆ ಸೈರನ್ ಹಾಕಿಕೊಂಡು ಬಂದಿದ್ದ 7 ಆ್ಯಂಬುಲೆನ್ಸ್‌ಗಳ ಮೇಲೆ ಈಗ ಪ್ರಕರಣ ದಾಖಲಾಗಿದೆ. ಆ್ಯಂಬುಲೆನ್ಸ್‌ನಲ್ಲಿ ರೋಗಿಗಳಲ್ಲಿದೆ ಸೈರನ್ ಹಾಕಿಕೊಂಡು ಹಾಗೂ ಟಾಪ್ ನಲ್ಲಿ ಲೈಟ್ ಹಾಕಿಕೊಂಡು ಬಂದಿದ್ದ 7 ಆ್ಯಂಬ್ಯುಲೆನ್ಸ್ ಮೇಲೆ ಈಗ ಪ್ರಕರಣ ದಾಖಲಾಗಿದೆ. ಜನರಿಗೆ ಭೀತಿ ಹುಟ್ಟಿಸಿದ ಆರೋಪ ಮೇಲೆ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅದಲ್ಲದೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸ್ವಾಗತ ಕಾರ್ಯಕ್ರಮದಲ್ಲಿ ಡ್ರೋನ್ ಕ್ಯಾಮರಾದಲ್ಲಿ ಕೆಲಸ ಮಾಡುವ ವೇಳೆ ಛಾಯಾಗ್ರಾಹಕ ಕುಸಿದು ಬಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಕೂಡ ನಡೆದಿದೆ. 25 ವರ್ಷದ ಯುವಕ ಅವಿನಾಶ್ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ನಿನ್ನೆ ರಾತ್ರಿಯಿಂದ ಮುಂಜಾನೆವರೆಗೂ ನಡೆದ ರೋಡ್ ಶೋ ಆಗಿದ್ದು, ರೋಡ್ ಶೋ ದೃಶ್ಯವನ್ನ ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸದೆ.