ಗಣೇಶೋತ್ಸವ ನಿಮಿತ್ತ ಸಾಂಸ್ಕೃತಿಕ ವೈಭವ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ವಿನಾಯಕ ನಗರದಲ್ಲಿ ವಿನಾಯಕ ನಗರ ಅಭಿವೃದ್ಧಿ ಸಮಿತಿಯಿಂದ ಶುಕ್ರವಾರ ಸಂಜೆ ಲಲಿತಾ ಸಹಸ್ರನಾಮ ಪಠಣ, ಭರತನಾಟ್ಯ, ಸಂಗೀತ ಕಾರ್ಯಕ್ರಮಗಳ ಮೂಲಕ 3ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಯಿತು.

Advertisement

ಪಟ್ಟಣದ ಗಿರಿಜಾ ಶಂಕರ ರುದ್ರ ಬಳಗದ ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಾರಾಯಣವು ಎಲ್ಲರನ್ನು ಭಕ್ತಿ ಪರವಶಗೊಳಿಸಿತು. ನಂತರ ಕಲಾ ವೈಭವ ಭರತನಾಟ್ಯ ತಂಡದ ಮಕ್ಕಳಿಂದ ಭರತನಾಟ್ಯ ಎಲ್ಲರ ಮನಸೆಳೆಯಿತು. ಶಾರದಾ ಸ್ವರಾಂಜಲಿ ಸಂಗೀತ ಪಾಠಶಾಲೆ ಮಕ್ಕಳಿಂದ ಸುಮಧುರ ಭಕ್ತಿ ಗೀತೆಗಳ ವೈಭವ, ಮಕ್ಕಳು ಹಾಗೂ ಸ್ಥಳೀಯ ಕಲಾವಿದರಿಂದ ಹಾಡು-ನೃತ್ಯ-ಸಂಗೀತ ಕಾರ್ಯಕ್ರಮ ಎಲ್ಲರನ್ನು ರಂಜಿಸಿದವು. ಮಹಿಳೆಯರಿಗಾಗಿ ರಂಗೋಲಿ ಸ್ಫರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ವಿನಾಯಕ ನಗರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ, ಕಾರ್ಯದರ್ಶಿ ರಾಘವೇಂದ್ರ ಕಡೆಮನಿ, ವಿಠ್ಠಲ ಬದಿ, ಡಾ. ಎಸ್.ಸಿ. ನೇಕಾರ, ವೀರೇಶ ಸಾಸಲವಾಡ, ರಾಜು ಕನವಳ್ಳಿ, ಸತ್ಯೇಂದ್ರ ಸಭಾವಡೆಯರಮಠ, ಮಂಜಯ್ಯ ಯಲಿಮಠ, ಚನ್ನವೀರಯ್ಯ ಹಿರೇಮಠ, ಪ್ರಕಾಶ ವಾಲಿ, ಪ್ರಶಾಂತ ಸರ್ವದೆ, ರವಿ ಬೋಮಲೆ, ಭರತ್ ಜೈನ್, ಬಸವರಾಜ ಪಡಸಾಲಿ, ಆರ್.ಪಿ. ಪುರಾಣಿಕಮಠ, ಅನಿಲ ಕುಲಕರ್ಣಿ, ಮಂಜುನಾಥ ಉಮಚಗಿ, ಈರಣ್ಣ ಬೆಳವಿಗಿ, ಕುಮಾರ ಭಂಗಿ, ಸತೀಶ ಪಾಟೀಲ, ಜಗದೀಶ್ ಆಚಾರ, ಮಂಜುನಾಥ ಬಂಡಿವಾಡ, ವಿಜಯ ತುಪ್ಪದ ಇದ್ದರು. ನಿರಂಜನ ವಾಲಿ, ಬಸವರಾಜ ಶೆಟ್ಟರ ಕಾರ್ಯಕ್ರಮ ನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here