HomeBengaluru Newsಅಹಂಕಾರದ ರಾಜಕಾರಣಕ್ಕೆ ಲಗಾಮು : ಅಡ್ವಕೇಟ್ ತಾಹೇರ್ ಹುಸೇನ್

ಅಹಂಕಾರದ ರಾಜಕಾರಣಕ್ಕೆ ಲಗಾಮು : ಅಡ್ವಕೇಟ್ ತಾಹೇರ್ ಹುಸೇನ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದಿಂದ ದ್ವೇಷ ಮತ್ತು ಅಹಂಕಾರದ ರಾಜಕಾರಣಕ್ಕೆ ಮತದಾರ ಮೂಗುದಾರ ತೊಡಿಸಿದ್ದಾನೆ. ಬಣ್ಣದ ಮಾತುಗಳು ಹೆಚ್ಚು ಕಾಲ ನಡೆಯದು ಎಂಬುದು ಈ ಫಲಿತಾಂಶ ದಿಂದ ಸ್ಪಷ್ಟವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಧರ್ಮದ ಭಾವನೆ ಕೆರಳಿಸುವ ಪ್ರಯತ್ನ ಮಾಡಿಯೂ ರಾಜ್ಯದಲ್ಲಿ ಮೋದಿ ವರ್ಚಸ್ಸು ಪರಿಣಾಮ ಬೀರಿಲ್ಲ. ಕೈಯಲ್ಲಿರುವ ಸೀಟನ್ನು ಉಳಿಸಿಕೊಳ್ಳಲು ಅವರಿಂದಾಗಲಿಲ್ಲ. ರಾಜ್ಯ ಸರ್ಕಾರ ಕೂಡಾ ಹೆಚ್ಚಾಗಿ ಗ್ಯಾರಂಟಿಯನ್ನೇ ಅವಲಂಬಿಸಿತು. ನಿರೀಕ್ಷಿತ ಸ್ಥಾನವನ್ನು ಗಳಿಸದಿದ್ದರೂ ಒಂಬತ್ತು ಸ್ಥಾನ ಗೆದ್ದಿದೆ. ಬಿಜೆಪಿಯ ಅಹಂಕಾರದ ಹುಚ್ಚು ನಾಗಾಲೋಟಕ್ಕೆ ಮತದಾರ ಲಗಾಮು ಹಾಕಿದ್ದಾನೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಫಲಿತಾಂಶ ದೊರಕದಿರುವುದು ಕಾಂಗ್ರೆಸ್‌ಗೂ ಪಾಠವಾಗಿದೆ. ಕೇವಲ ಗ್ಯಾರಂಟಿಗಳಿಂದ ಗೆಲ್ಲಲಾಗದು. ದ್ವೇಷ ರಾಜಕಾರಣವನ್ನು ಮಟ್ಟ ಹಾಕಿ, ಭ್ರಷ್ಟಾಚಾರ ರಹಿತರಾಗಿ ಜನರ ಹಿತಾಸಕ್ತಿಗಳನ್ನು ಕಾಪಾಡಲು ಸರಕಾರ ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!