ಬೆಂಗಳೂರು:- ತುರ್ತು ಕಾಮಗಾರಿ ಹಿನ್ನೆಲೆ ಸಿಲಿಕಾನ್ ಸಿಟಿಯ ಕೆಲವು ಕಡೆ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಸಿಲಿಕಾನ್ ಸಿಟಿಯ ಕೆಲವು ಕಡೆ ಇಂದು ಬೆಸ್ಕಾಂ ಕಾಮಗಾರಿ ನಡೆಯುತ್ತಿದೆ, ಕೆಲವು ಕಡೆ ನವೀಕರಣವಾಗುತ್ತಿದೆ. ಅಂತಹ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಯಾವ್ಯಾವ ಪ್ರದೇಶಗಳಲ್ಲಿ ಪವರ್ ಕಟ್?
ಬೆಸ್ಕಾಂ ನೀಡಿರುವ ಮಾಹಿತಿಗಳ ಪ್ರಕಾರ ಬ್ರೆಂಟನ್ ರೋಡ್, ಶೋಭಾ ಪರ್ಲ್, ಐಸಿಐಸಿ ಬ್ಯಾಂಕ್, ಹರ್ಬನ್ ಲೈಫ್, ಆರ್‌ಎಂಝಡ್, ಅಶೋಕ ನಗರ, ಗರುಡಾಮಾಲ್, ದೊಮ್ಮಲೂರು, ಆಸ್ಟಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ತಾಜ್ ಹೋಟೆಲ್, ವಿಕ್ಟೊರಿಯಾ ಲೇಔಟ್, ಮ್ಯೂಸಿಯಂ ರೋಡ್, ಅಲ್ಬರ್ಟ್ ರಸ್ತೆ, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಅಡ್ಡ ರಸ್ತೆ, ಲ್ಯಾವೆಲ್ಲೆ ರೋಡ್ ಮತ್ತಿತರ ಕಡೆ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.
ಇದಲ್ಲದೆ ಸೆಂಟ್ ಮಾರ್ಕ್ ರೋಡ್, ವೈಜಿ. ಪಾಳ್ಯ, ಕೆಎಸ್‌ಆರ್‌ಪಿ, ಐಟಿಸಿ ಹೋಟೆಲ್, ರಿಚ್ಮಂಡ್ ರೋಡ್, ಮಹಾತ್ಮಾ ಗಾಂಧಿ ರಸ್ತೆ, ಎಸ್‌ಎಲ್ ಅಪಾರ್ಟ್‌ಮೆಂಟ್, ರಿಚ್ಮಂಡ್ ಟೌನ್, ಸ್ಟೆನ್ ಗಾರ್ಡನ್, ರಿಚ್‌ಮಂಡ್ ಪಾರ್ಕ್, ಲಾಂಗ್‌ಫೋರ್ಡ್ ರೋಡ್, ಬ್ರೇಡ್ ಸ್ಟ್ರೀಟ್, ಫುಡ್‌ವರ್ಲ್ಡ್ ರಸ್ತೆ, ಜಾನ್ಸನ್ ಮಾರ್ಕೆಟ್, ಬಿಡಬ್ಲ್ಯೂಎಸ್ಎಸ್‌ಬಿ ನೀರು ಸರಬರಾಜು ಕಚೇರಿ, ಬ್ರಿಗೇಡ್ ರೋಡ್, ರಿಚ್ಮಂಡ್ ಸರ್ಕಲ್, ವಿಟ್ಲ ಮಲ್ಯ ರಸ್ತೆ, ಸಿದ್ದಯ್ಯ ರಸ್ತೆ, ಆನೆಪಾಳ್ಯ ಪ್ರದೇಶಗಳಲ್ಲಿ ಇಂದು ಮಧ್ಯಾಹ್ನ 3 ಗಂಟೆಯವರೆಗೆ ಕರೆಂಟ್ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.