Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಕಟ್: ಪವರ್ ಇಲ್ಲದ ಏರಿಯಾಗಳ ಪಟ್ಟಿ ಇಲ್ಲಿದೆ!

0
Spread the love

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Advertisement

ಕೆಪಿಟಿಸಿಎಲ್‌ನ ವಿದ್ಯುತ್‌ ಮಾರ್ಗಗಳ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನಾಳೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಅದರಂತೆ ನಗರದ ಜೈ ಭುವನೇಶ್ವರ ಲೇಔಟ್, ಕೆಆರ್ ಪುರಂ ಮುಖ್ಯರಸ್ತೆ, ದೀಪಾ ಆಸ್ಪತ್ರೆ ಸುತ್ತಮುತ್ತ, ವಿನಾಯಕ ಲೇಔಟ್, ಅಜಿತ್ ಲೇಔಟ್, ಟಿಸಿ ಪಾಳ್ಯ ಸಿಗ್ನಲ್, ಭಟ್ಟರಹಳ್ಳಿ, ಚಿಕ್ಕಬಸವನಪುರ ಮತ್ತು ಯರಪ್ಪನ ಪಾಳ್ಯ, ಕುವೆಂಪು ನಗರ, ರಾಮಮೂರ್ತಿ ನಗರ, ಎನ್‌ಆರ್‌ಐ ಲೇಔಟ್ ರಾಮಮೂರ್ತಿ ನಗರ, ಸಿಎಎನ್‌ವಿ ಲೇಔಟ್ ರಾಮಮೂರ್ತಿ ಮೇನ್ ರಸ್ತೆ, ರಾಘವೇಂದ್ರ ವೃತ್ತ, ಆಲ್ಫಾ ಗಾರ್ಡನ್, ಸ್ವತಂತ್ರ ನಗರ, ರಾಜೇಶ್ವರಿ ಲೇಔಟ್, ಮುನೇಶ್ವರ ಲೇಔಟ್.

ಕೋ ಕೋನಟ್ ಗಾರ್ಡನ್, ಬೆಥೆಲ್ ನಗರ, ಬೃಂದಾವನ ಲೇಔಟ್, ಕೆಆರ್‌ಆರ್ ಲೇಔಟ್, ಕೇಂಬ್ರಿಡ್ಜ್ ಲೇಔಟ್, ಕೇಂಬ್ರಿಡ್ಜ್ ಗಾರ್ಡನ್ ಲೇಔಟ್ ಮತ್ತು ವಾರಣಾಸಿ ಲೇಕ್, ಗ್ಯಾಸ್ ಗೌಡೌನ್ ಮುಖ್ಯ ರಸ್ತೆ, ಎನ್‌ಆರ್‌ಐ 5 ನೇ ಮುಖ್ಯ ರಸ್ತೆ, ಗ್ರೀನ್‌ವುಡ್ ಲೇಔಟ್, ಪ್ರತಿಷ್ಠಾನ ಲೇಔಟ್, ಗ್ರೀನ್ ಗಾರ್ಡನ್ ಲೇಔಟ್, ಜೆಕೆ ಹಳ್ಳಿ, ಸನ್‌ಶೈನ್‌ ಲೇಔಟ್, ಗಾರ್ಡನ್ ಸಿಟಿ ಕಾಲೇಜು.

ಲೇಕ್ ವ್ಯೂ ಸಿಟಿ, ಆನಂದಪುರ, ಮಾನ್ಸೂನ್ ಪಬ್ಲಿಕ್ ಸ್ಕೂಲ್ ರಸ್ತೆ, ಸಾಯಿ ಗಾರ್ಡನ್, ಮದರ್ ಥೆರೆಸಾ ಸ್ಕೂಲ್ ರಸ್ತೆ, ಹೊಯ್ಸಳ ನಗರ 1ನೇ ಮುಖ್ಯ, 2ನೇ ಮುಖ್ಯ, 3ನೇ ಮುಖ್ಯ ಮತ್ತು 6ನೇ ಮುಖ್ಯ, ಬಿಡಬ್ಲುಎಸ್‌ಎಸ್‌ಬಿ ಮತ್ತು ರಾಮಮೂರ್ತಿ ಮುಖ್ಯ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಅಲ್ಲದೆ, ಆದರ್ಶ್ ಟೆಕ್ ಪಾರ್ಕ್, ಜೆಕೆ ಹೋಟೆಲ್, ಕ್ವಾಲ್ಕಾಮ್ ಎಂಟರ್‌ಪ್ರೈಸಸ್, ಎಸ್‌ಎಪಿ ಲ್ಯಾಬ್, ಗೋಪಾಲನ್ ಎಂಟರ್‌ಪ್ರೈಸಸ್, ವಿ.ಕೆ.ಟೆಕ್ ಪಾರ್ಕ್, ರಾಮಗೊಂಡನಹಳ್ಳಿ, ನೇತ್ರಾ ಟೆಕ್ ಪಾರ್ಕ್, ಶ್ರೀ ರಾಬರ್ಟ್ ಕ್ರಿಸ್ಟೋಫರ್ಸ್, ಶ್ರೀ ಚೈತನ್ಯ ಪ್ರಾಪರ್ಟೀಸ್, ಕ್ವಾಲ್ಕಾಮ್ ಬ್ಲಾಕ್ 2, ಮೈಂಡ್ ಟ್ರೀ, ಜಿಂಜರ್ ಹೋಟೆಲ್, ಆಶಿಶ್ ಸಿಮ್ರಾನ್, ವೈದೇಹಿ ಆಸ್ಪತ್ರೆ, ಎಸ್‌ಜೆಆರ್‌ ಟೆಕ್ ಪಾರ್ಕ್, ಸಂತೋಷ್ ಟವರ್ಸ್, ಶೈಲೇಂದ್ರ ಟೆಕ್ ಪಾರ್ಕ್, ಕ್ವಾಲ್ಕಾಮ್ ಸಿ ಬ್ಲಾಕ್, ಇಪಿಐಪಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್‌ ವ್ಯತ್ಯಯ ಆಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.


Spread the love

LEAVE A REPLY

Please enter your comment!
Please enter your name here