HomeLife Styleಕರಿಬೇವಿನ ಎಲೆ ಎಲ್ಲರಿಗೂ ಸೂಕ್ತವಲ್ಲ: ಕೆಲವರಿಗೆ ಆರೋಗ್ಯ ಸಮಸ್ಯೆಗಳ ಅಪಾಯ! ಬಳಸದಿರುವುದೇ ಒಳ್ಳೆಯದು

ಕರಿಬೇವಿನ ಎಲೆ ಎಲ್ಲರಿಗೂ ಸೂಕ್ತವಲ್ಲ: ಕೆಲವರಿಗೆ ಆರೋಗ್ಯ ಸಮಸ್ಯೆಗಳ ಅಪಾಯ! ಬಳಸದಿರುವುದೇ ಒಳ್ಳೆಯದು

For Dai;y Updates Join Our whatsapp Group

Spread the love

ನಮ್ಮ ದೈನಂದಿನ ಅಡುಗೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಕರಿಬೇವಿನ ಎಲೆ ರುಚಿ ಮಾತ್ರವಲ್ಲದೆ ಔಷಧೀಯ ಗುಣಗಳಿಗೂ ಪ್ರಸಿದ್ಧವಾಗಿದೆ.

ಆದರೆ, ಇದನ್ನು ಎಲ್ಲರೂ ನಿರಾಳವಾಗಿ ಸೇವಿಸಬಹುದು ಎಂಬುದು ತಪ್ಪು ಕಲ್ಪನೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಕೆಲ ವಿಶೇಷ ಆರೋಗ್ಯ ಸಮಸ್ಯೆಗಳಿರುವವರು ಕರಿಬೇವಿನ ಎಲೆಗಳನ್ನು ಮಿತವಾಗಿ ಅಥವಾ ವೈದ್ಯರ ಸಲಹೆಯೊಂದಿಗೆ ಮಾತ್ರ ಬಳಸಬೇಕು ಎಂದು ಹೇಳಿದ್ದಾರೆ.

ತಜ್ಞರ ಪ್ರಕಾರ, ರಕ್ತದಲ್ಲಿ ಶುಗರ್ ಮಟ್ಟ ಈಗಾಗಲೇ ಕಡಿಮೆ ಇರುವವರು ಕರಿಬೇವಿನ ಎಲೆಗಳನ್ನು ಹೆಚ್ಚು ಸೇವಿಸಿದರೆ ಹೈಪೋಗ್ಲೈಸೀಮಿಯಾ ಸಮಸ್ಯೆ ಉಂಟಾಗಿ ತಲೆ ಸುತ್ತು, ದೌರ್ಬಲ್ಯ ಕಾಣಿಸಿಕೊಳ್ಳಬಹುದು. ಕೆಲವರಿಗೆ ಅಲರ್ಜಿ ಉಂಟಾಗಿ ಚರ್ಮದಲ್ಲಿ ಉರಿ, ಊತ ಅಥವಾ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಹಾರ್ಮೋನ್ ಬದಲಾವಣೆಗಳಿಂದ ದೇಹ ಸಂವೇದನಾಶೀಲವಾಗಿರುವುದರಿಂದ, ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡಿದರೆ ವಾಂತಿ ಅಥವಾ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗಬಹುದು.

ಇದಲ್ಲದೆ, ಅಲ್ಸರ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯಿರುವವರು ಹಸಿ ಕರಿಬೇವಿನ ಎಲೆಗಳನ್ನು ನೇರವಾಗಿ ಸೇವಿಸುವುದನ್ನು ತಪ್ಪಿಸಿಕೊಳ್ಳಬೇಕು. ಕಿಡ್ನಿ ಸಮಸ್ಯೆಯಿರುವವರು ಅಥವಾ ಡಯಾಲಿಸಿಸ್ ಪಡೆಯುತ್ತಿರುವವರು ಯಾವುದೇ ಔಷಧೀಯ ಸಸ್ಯಗಳಂತೆ ಇದನ್ನೂ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!