Curry Leaves Benefits: ನಿತ್ಯ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

0
Spread the love

ಅಡುಗೆ ಮನೆಯ ಕೆಲವು ಆಹಾರ ಪದಾರ್ಥಗಳು ನಮಗೆ ಅದ್ಭುತವಾಗಿ ಕೆಲಸ ಮಾಡುತ್ತವೆ ಎನ್ನುವುದಕ್ಕೆ ಕರಿಬೇವಿನ ಸೊಪ್ಪು ಒಂದು ಉದಾಹರಣೆ. ಕರಿಬೇವಿನ ಎಲೆಗಳನ್ನು ನಾವು ಪ್ರತಿದಿನ ಅಡುಗೆಗೆ ಬಳಕೆ ಮಾಡುತ್ತೇವೆ ಮತ್ತು ಇದಕ್ಕೆ ಸಂಬಂಧಪಟ್ಟ ಆರೋಗ್ಯ ಲಾಭಗಳನ್ನು ನಮಗೆ ಗೊತ್ತಿಲ್ಲದೆ ಪಡೆದು ಕೊಳ್ಳು ತ್ತಿದ್ದೇವೆ. ಆದರೆ ಕರಿಬೇವಿನ ಎಲೆಗಳನ್ನು ನೆನೆಸಿ ಅದರ ನೀರು ಕುಡಿಯುವುದರಿಂದ ಮತ್ತಷ್ಟು ಲಾಭಗಳನ್ನು ನಾವು ಕಂಡುಕೊಳ್ಳಬಹುದು.

Advertisement

ಕರಿಬೇವು ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ವಿಟಮಿನ್ ಸಿ ಮತ್ತು ವಿಟಮಿನ್-ಎ ಮುಂತಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವು ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಅಷ್ಟೇ ಅಲ್ಲ, ಕರಿಬೇವು ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವನ್ನು ಸೇವಿಸಿದರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿಂಬೆ ರಸ ಮತ್ತು ಕರಿಬೇವಿನ ರಸವನ್ನು ಸಕ್ಕರೆಯೊಂದಿಗೆ ಒಟ್ಟಿಗೆ ಸೇವನೆ ಮಾಡಬೇಕು. ಇದು ವಾಂತಿ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಯಕೃತ್ತು ಆರೋಗ್ಯಕರವಾಗಿರುತ್ತದೆ. ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಕರಿಬೇವು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕರಿಬೇವು ಲಿವರ್ ಸಿರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಕರಿಬೇವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದ ಹೊಟ್ಟೆನೋವು ನಿವಾರಣೆಯಾಗುವುದಲ್ಲದೆ ಮಲಬದ್ಧತೆ, ಆಮ್ಲೀಯತೆ ಮತ್ತು ಅಜೀರ್ಣ ನಿವಾರಣೆಯಾಗುತ್ತದೆ. ಇದಕ್ಕೆ ಮೊಸರು ಅಥವಾ ಮಜ್ಜಿಗೆಯೊಂದಿಗೆ ಕರಿಬೇವನ್ನು ಸೇವನೆ ಮಾಡಬೇಕು.

ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಒಮ್ಮೆ ಕರಿಬೇವನ್ನು ಬಳಸಿ ನೋಡಿ. ಕರಿಬೇವು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರತಿದಿನ ಬೆಳಿಗ್ಗೆ ತುಳಸಿ ಎಲೆಗಳೊಂದಿಗೆ ಕರಿಬೇವನ್ನು ತಿನ್ನಿ.

ಕರಿಬೇವು ವಿಟಮಿನ್-ಎ ಸಮೃದ್ಧವಾಗಿದೆ. ಅದಕ್ಕಾಗಿಯೇ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೃಷ್ಟಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕಣ್ಣುಗಳನ್ನು ಆರೋಗ್ಯವಾಗಿಡಲು ಬಹಳಷ್ಟು ಸಹಾಯ ಮಾಡುತ್ತದೆ.


Spread the love

LEAVE A REPLY

Please enter your comment!
Please enter your name here