ದೇವನಹಳ್ಳಿ: ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ಪೋರ್ಟ್ನಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 3 ಕೋಟಿ 44 ಲಕ್ಷ ಮೌಲ್ಯದ 3 ಕೆಜಿ 995 ಗ್ರಾಂ ಚಿನ್ನವನ್ನು ಡಿಆರ್ಐ ಬೆಂಗಳೂರು ಅಧಿಕಾರಿಗಳು ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ದುಬೈ ನಿಂದ ಬೆಂಗಳೂರಿಗೆ ಶರ್ಟ್ ನ ಒಳ ಭಾಗದಲ್ಲಿ ಚಿನ್ನ ಅಡವಿಟ್ಟುಕೊಂಡು ಆರೋಪಿ ಬಂದಿದ್ದನು. ಈ ವೇಳೆ ವೇಳೆ ಆರೋಪಿಯಿಂದ 3 ಕೋಟಿ 44 ಲಕ್ಷ ಮೌಲ್ಯದ 3 ಕೆಜಿ 995 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಚಿನ್ನ ಸಾಗಾಟ ಮಾಡ್ತಿದ್ದ ಆರೋಪಿಯನ್ನ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.