ದಿನಕ್ಕೊಂದು ಹಸಿ ಈರುಳ್ಳಿ ಕತ್ತರಿಸಿಕೊಂಡು ತಿನ್ನಿ ಸಾಕು; ಈ ಕಾಯಿಲೆಗಳು ಮಾಯ!

0
Spread the love

ಈರುಳ್ಳಿ ಹೆಚ್ಚಿದರೆ ಕಣ್ಣಿನಲ್ಲಿ ನೀರು ಬರುತ್ತದೆ ಎಂಬುದು ಹಳೆಯ ಮಾತು. ಆದರೆ ಕೆಲವೊಂದು ಆಹಾರ ಸಾಮಗ್ರಿಗಳು ಬಹಳಷ್ಟು ವಿಶಿಷ್ಟವಾದ ಸ್ಥಾನದಲ್ಲಿ ನಿಲ್ಲುತ್ತವೆ ಎಂಬುದನ್ನು ಮೊದಲು ತಿಳಿಯಬೇಕು. ಅದರಲ್ಲಿ ಈರುಳ್ಳಿ ಸಹ ಒಂದು. ಮನುಷ್ಯನ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತಹ ಶಕ್ತಿ ಈರುಳ್ಳಿಗಿದೆ.

Advertisement

ಇದರಲ್ಲಿರುವ ಕಬ್ಬಿಣ, ಪೊಟಾಶಿಯಂ, ನಾರು ಮತ್ತಿತರ ಸೂಕ್ಷ್ಮ ಪೋಷಕಾಂಶಗಳು ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತವೆ. ತೂಕ ಇಳಿಸುವ ಉದ್ದೇಶವಿದ್ದರೆ, ಕಡಿಮೆ ಕ್ಯಾಲರಿಯ ಆದರೆ ಹೆಚ್ಚು ಪೌಷ್ಟಿಕವಿರುವ ಈ ಗಡ್ಡೆ ಉಪಯುಕ್ತವಾದದ್ದು.

ಇದರಲ್ಲಿರುವ ನಾರು ಮತ್ತು ಪ್ರಿಬಯಾಟಿಕ್‌ ಅಂಶಗಳು ಜೀರ್ಣಾಂಗದ ಕ್ಷಮತೆಯನ್ನು ಹೆಚ್ಚಿಸುತ್ತವೆ. ಪೊಟಾಶಿಯಂ ಮತ್ತು ಮೆಗ್ನೀಶಿಯಂ ಸತ್ವಗಳು ದೇಹದ ಚಯಾಪಚಯವನ್ನು ಹೆಚ್ಚಿಸಿ, ಮೂಳೆಗಳನ್ನು ದೃಢಗೊಳಿಸುತ್ತವೆ. ಇದರ ಫೋಲೇಟ್‌ ಅಂಶದಿಂದಾಗಿ ನರಗಳ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

ಈರುಳ್ಳಿ ಕೆಲವರಿಗೆ ಘಮ ಎನಿಸಿದರೆ ಕೆಲವರಿಗೆ ವಾಸನೆ! ಆದರೆ ಘಮ ಅಥವಾ ವಾಸನೆಗೆ ಕಾರಣವಾಗುವ ಅಂಶವು ಸೋಂಕು ನಿರೋಧಕ ಗುಣವನ್ನು ಹೊಂದಿದೆ. ನೆಗಡಿ, ಕೆಮ್ಮು, ಕಫ, ಅಸ್ತಮಾ ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಈರುಳ್ಳಿ ನೆರವಾಗುತ್ತದೆ.

ಇದರಲ್ಲಿರುವ ವಿಟಮಿನ್‌ ಸತ್ವಗಳಿಂದಾಗಿ ಚರ್ಮ, ಕೂದಲುಗಳ ಆರೋಗ್ಯ ಸುಧಾರಿಸುತ್ತದೆ. ಕೊಲಾಜಿನ್‌ ಉತ್ಪತ್ತಿಯನ್ನು ವೃದ್ಧಿಸುತ್ತದೆ. ಕೂದಲು ಉದುರುತ್ತಿದ್ದರೆ, ಹೊಟ್ಟು, ತುರಿಕೆ ಮುಂತಾದ ಸಮಸ್ಯೆಗಳಿದ್ದರೆ ಈರುಳ್ಳಿ ಲೇಪ ಲಾಭದಾಯಕ.

 


Spread the love

LEAVE A REPLY

Please enter your comment!
Please enter your name here