ಸೈಬರ್ ಪೊಲೀಸರ ದಾಳಿ; ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಟಂ ಟಂ ಚಾಲಕರ ಬಂಧನ, ‌ಮತ್ತೊಬ್ಬ ಪರಾರಿ

0
Spread the love

ಗದಗ: ಬಸ್ ನಿಲ್ದಾಣದ ಬಳಿ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಟಂ ಟಂ ಚಾಲಕರ ಮೇಲೆ ಸಿಇಎನ್ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾದ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.

Advertisement

ಸಿಇಎನ್ ಪೊಲೀಸ್ ಠಾಣೆಯ ಎಸ್. ಎಮ್. ಶಿರಗುಪ್ಪಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು, ಹುಲಕೋಟಿ ಗ್ರಾಮದ ಸಾಯಿ ನಗರ‌ ನಿವಾಸಿಗಳಾದ ಟಂ ಟಂ ಚಾಲಕರಾದ ಮಣಿಕಂಠ ತಂದೆ ಕರಿಯಪ್ಪ ಕೊಂಡಿಕೊಪ್ಪ (22), ಹರೀಶ್ ತಂದೆ ಹನಮಂತಪ್ಪ ಹರಕುಣಿ (23) ಎಂಬ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮರಿಯಪ್ಪ ತಂದೆ ಕರಿಯಪ್ಪ ಕವಡಿಕಿ ಎಂಬ ಟಂ ಟಂ ಚಾಲಕ ಪರಾರಿಯಾಗಿದ್ದಾನೆ.

ಬಂಧಿತರಿಂದ 13,440 ರೂ. ಮೌಲ್ಯದ 448 ಗ್ರಾಮ ಗಾಂಜಾ ಹಾಗೂ ಟಂ‌ಟಂ ಜಪ್ತಿ ಮಾಡಲಾಗಿದೆ.

ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ 0006/2024-NARCOTIC DRUGS AND PSYCHOTROPIC SUBSTANCE ACT, 1985( U/s-20(b)(¡¡)(A)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here