ವಿಜಯಪುರ:- ವಿಜಯಪುರದ ಚಾಲುಕ್ಯ ನಗರದ ಎಸ್‌ಬಿಐ ಬ್ಯಾಂಕ್ ಬಳಿ ಸಿಗರೇಟ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಬ್ಲಾಸ್ಟ್ ಆಗಿ ಏಳು ಗೂಡಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಜರುಗಿದೆ.
ಬೆಂಕಿ ಅವಘಡದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಮೈಝುಮ್ ಎನ್ನುವಂತಿದೆ. ಸಿಗರೇಟ್ ಕಿಡಿಯಿಂದ ಹೊತ್ತಿದ ಬೆಂಕಿಗೆ, ಟೀ ಕಾಫಿ, ಫುಡ್ ಸ್ಟಾಲ್, ವಡಾಪಾವ್ ಶಾಪ್‌ಗಳು ಭಸ್ಮವಾಗಿದ್ದು, ಗೂಡಂಗಡಿಗಳಲ್ಲಿದ್ದ ಗ್ಯಾಸ್ ಸಿಲಿಂಡರ್ ಗಳು ಬ್ಲಾಸ್ಟ್ ಆಗಿವೆ. ಇನ್ನೂ ಗೂಡಂಗಡಿಗೆ ಹೊತ್ತಿಕೊಂಡ ಬೆಂಕಿ ಪಕ್ಕದ ಮನೆಗೂ ವ್ಯಾಪಿಸಿದೆ. ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.



