Bengaluru: ಮನೆಯಲ್ಲಿ ಸಿಲಿಂಡರ್ ಸ್ಫೋಟ; 7 ಮಂದಿ ಗಂಭೀರ!

0
Spread the love

ಬೆಂಗಳೂರು:- ಸಿಲಿಂಡರ್ ಸ್ಫೋಟಗೊಂಡು ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾಸರಹಳ್ಳಿಯ ಚೊಕ್ಕಸಂದ್ರದ ಮನೆಯೊಂದರಲ್ಲಿ ಜರುಗಿದೆ.

Advertisement

34 ವರ್ಷದ ದಿಜುಧಾರ್, 31 ವರ್ಷದ ಅಂಜಲಿದಾಸ್, 3 ವರ್ಷದ ಮನುಶ್ರೀ, 25 ವರ್ಷದ ಮನು, 50 ವರ್ಷದ ತಿಪ್ಪೇರುದ್ರಸ್ವಾಮಿ, ಪಕ್ಕದ ಮನೆ 60 ವರ್ಷದ ಶೋಭ ಮತ್ತು ಕರೀಬುಲ್ಲ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ದಿಜುಧಾರ್​ ಎಂಬುವರ ಮನೆಯಲ್ಲಿ ಗ್ಯಾಸ್​ ಸಿಲಿಂಡರ್​ ಸೋರಿಕೆಯಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀರ್ವತೆಗೆ ಎದುರು ಮನೆಯವರಿಗೂ ಗಾಯವಾಗಿದೆ.

ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೀಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here