HomeKarnataka Newsಸಿಲಿಂಡರ್ ಸ್ಫೋಟ, ಮನೆ ಸುಟ್ಟು ಕರಕಲು: ದಂಪತಿ ಪ್ರಾಣಾಪಾಯದಿಂದ ಪಾರು!

ಸಿಲಿಂಡರ್ ಸ್ಫೋಟ, ಮನೆ ಸುಟ್ಟು ಕರಕಲು: ದಂಪತಿ ಪ್ರಾಣಾಪಾಯದಿಂದ ಪಾರು!

For Dai;y Updates Join Our whatsapp Group

Spread the love

ಕಲಬುರಗಿ: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಭೀಕರ ಅಗ್ನಿ ಅವಘಡ ಸಂಭವಿಸಿ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡು, ಮನೆ ಸುಟ್ಟು ಕರಕಲಾಗಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ದಂಪತಿಗಳು ಹೊರಗಡೆ ಇದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಂಡ ಈರಯ್ಯ ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ಅವರ ಪತ್ನಿ ಗ್ಯಾಸ್ ಮೇಲೆ ಅನ್ನಕ್ಕೆ ಇಟ್ಟು ಹೊರಗಡೆ ಪಾತ್ರೆ ತೊಳೆಯುತ್ತಿದ್ದಾಗ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಸಿಲಿಂಡರ್ ಸ್ಪೋಟಗೊಂಡ ನಂತರ ಬೆಂಕಿ ಹೊತ್ತಿಕೊಂಡಿದೆ.

ಮನೆಯಲ್ಲಿದ್ದ12 ಚೀಲ ಜೋಳ, 10 ಚೀಲ ತೊಗರಿ, 25 ಚೀಲ ಗೋದಿ, 19 ಗ್ರಾಮ ಬಂಗಾರದ ಒಡವೆ, 4 ಲಕ್ಷ ರೂ ನಗದು ಬೆಂಕಿಗೆ ಆಹುತಿಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ರು ಕೂಡ ಅಷ್ಟರಲ್ಲೇ ಮನೆ ಭಾಗಶಃ ಸುಟ್ಟು ಕರಕಲಾಗಿತ್ತು. ಇನ್ನೂ ಈ ಘಟನೆ ಸಂಬಂಧ ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!