ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ನಗರದ ಬೈಯ್ಯಪ್ಪನಹಳ್ಳಿಯ ನಾಗಪ್ಪ ಬಡವಾಣೆಯಲ್ಲಿ ನಡೆದಿದೆ. ಹನುಮಂತಪ್ಪ ( 70) , ಮಂಜುನಾಥ್ (33) ಮಮತ ( 29) ಗೆ ಸುಟ್ಟ ಗಂಭೀರ ಗಾಯವಾಗಿದ್ದು,
Advertisement
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಗಾಯಾಳುಗಳು ತಂದೆ, ಮಗ ಹಾಗು ಸೊಸೆಯಾಗಿದ್ದು ಇಂದು ಮುಂಜಾನೆ ಘಟನೆ ನಡೆದಿದೆ. ಇನ್ನೂ ಸ್ಟೋಟದ ತೀವ್ರತೆಗೆ ಮನೆ ಗೋಡೆ ಛಿದ್ರ ಛಿದ್ರವಾಗಿದೆ. ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.