ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ 8 ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಈ ಘಟನೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದವರು ಕಡು ಬಡುತನದಿಂದ ಬಂದವರಾಗಿದ್ದು, ಕನಿಷ್ಠ ಅವರಿಗೆ ತಲಾ 15 ಲಕ್ಷ ರೂಗಳನ್ನು ಸಹಾಯಧನ ಮಾಡಿದರೆ ಮೃತ ಕುಟುಂಬಸ್ಥರಿಗೆ ಆಧಾರವಾಗುತ್ತದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ನಗರದಲ್ಲಿ ಕಿಮ್ಸ್ ಗೆ ಭೇಟಿ ನೀಡಿ ಗಾಯಗೊಂಡಿರುವ ಅಯ್ಯಪ್ಪ ಸ್ವಾಮಿ ಮಾಲಾಧಾರಿಯ ಆರೋಗ್ಯ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದವರು ಕಡು ಬಡುತನದಿಂದ ಬಂದವರಾಗಿದ್ದು, ಹೊಟ್ಟೆಪಾಡಿಗಾಗಿ ದುಡಿದು ಕುಟುಂಬಸ್ಥರನ್ನು ಸಾಕುತ್ತಿದ್ದರು.
ಆದರೆ ಅವರ ಸ್ಥಿತಿ ಹೀಗಾಗಿದೆ. ಈಗಾಗಲೇ ಸರ್ಕಾರ ಐದು ಲಕ್ಷ ರೂ. ಘೋಷಣೆ ಮಾಡಿದೆ. ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರೊಂದಿಗೆ ಮಾತನಾಡಿದ್ದೇನೆ. ಇಂತಹ ಘಟನೆಗಳು ಸಂಭವಿಸಿದಾಗ ವಿಶೇಷವಾಗಿ ಪರಿಗಣನೆ ಮಾಡಿ ಕನಿಷ್ಠ ತಲಾ 15 ಲಕ್ಷ ರೂಗಳನ್ನು ಸಹಾಯಧನ ಮಾಡಿದರೆ ಮೃತ ಕುಟುಂಬಸ್ಥರಿಗೆ ಆಧಾರವಾಗುತ್ತದೆ ಎಂದರು.