ಸಿಲಿಂಡರ್ ಸೋರಿಕೆ: ಬೆಂಕಿಯಿಂದ ಕೂದಲೆಳೆ ಅಂತರದಲ್ಲಿ ಅತ್ತೆಸೊಸೆ ಪಾರು!

0
Spread the love

ಮೈಸೂರು: ಹುಣಸೂರು ತಾಲ್ಲೂಕಿನ ವಡ್ಡರಗುಡಿಯಲ್ಲಿ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ಅತ್ತೆ-ಸೊಸೆ ಪವಾಡದ ರೀತಿ ಪಾರಾಗಿರುವ ಘಟನೆ ಜರುಗಿದೆ.

Advertisement

ಘಟನೆಯಲ್ಲಿ ಚಿನ್ನಾಭರಣ ಸೇರಿದಂತೆ ಪದಾರ್ಥಗಳು ನಾಶವಾಗಿದೆ. ಘಟನೆಯಿಂದ ಮನೆಯ ಮೇಲ್ಚಾವಣಿ ಹಾನಿಯಾಗಿದೆ. ಚಿನ್ನಾಭರಣ, ಆಹಾರ ಪದಾರ್ಥಗಳು, ವಸ್ತುಗಳು ಬೆಂಕಿಗಾಹುತಿಯಾಗಿದೆ.

ಘಟನೆಯಲ್ಲಿ 60 ಗ್ರಾಂ ಚಿನ್ನಾಭರಣ 3 ಲಕ್ಷ ರೂ. ನಗದು ಸೇರಿ ಮನೆಯಲ್ಲಿದ್ದ ವಸ್ತುಗಳು ಬೆಂಗಿಗಾಹುತಿಯಾಗಿದೆ. ಸಿಲಿಂಡರ್‌ನ ಜೋರು ಶಬ್ದ ಕೇಳಿ ನೆರೆಹೊರೆಯವರು ಬಂದು ಇಬ್ಬರನ್ನೂ ರಕ್ಷಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here