ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಸಿಲಿಂಡರ್ ಕೊರತೆ ಹೆಚ್ಚಾಗಿದ್ದು, ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ಯಾಸ್ ಸಮಸ್ಯೆ ತೀವ್ರವಾಗಿದೆ.
ಸಂಡೇ-ಸಂಡೇ ಬಾಡೂಟಕ್ಕಾಗಿ ಅಡುಗೆ ತಯಾರಿಸುವ ಹೋಟೆಲ್ ಸಿಬ್ಬಂದಿ ಹೊಸ ಕಿಚನ್ ಸೆಟ್ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಬಳಸಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ.
ಯಶವಂತಪುರದ ಹೋಟೆಲ್ ಆಸರೆಯಲ್ಲಿ ಹೊಸ ಕಿಚನ್ ಸೆಟ್ ಆಪ್ ಮಾಡಿ ತಯಾರಿ ಮಾಡಲಾಗಿದೆ, ಮಹಾಲಕ್ಷ್ಮಿ ಲೇಔಟ್ ಆದಿತ್ಯ ಹೋಟೆಲ್ಗೂ ಸಿಲಿಂಡರ್ ಸಮಸ್ಯೆ ಎದುರಾಗಿದೆ. ಹೋಟೆಲ್ ಮಾಲೀಕರು ಸೌದೆ ಒಲೆ, ಎಲೆಕ್ಟ್ರಿಕ್ ಸ್ಟೌ ಬಳಸಿ ಖಾದ್ಯಗಳ ತಯಾರಿಯನ್ನು ಮುಂದುವರಿಸುತ್ತಿದ್ದಾರೆ. ರಾಜಾಜಿನಗರದ ರಾಜಣ್ಣ ಮಿಲಿಟರಿ ಹೋಟೆಲ್ನಲ್ಲಿಯೂ ಗ್ಯಾಸ್ ಸಿಲಿಂಡರ್ ಗೋಳು ಇನ್ನೂ ಮುಂದುವರಿದಿದೆ..



